ದೇಶಸೇವಾಗ್ರರು

ದೇಶಸೇವಾಗ್ರರು


ಸಂಘದಕ್ಷ, ಸಾವಧಾನ್, ವಿಶ್ರಾಮ್  ಈ ಶಬ್ದಗಳನ್ನು ಕೇಳಿದೊಡನೆ ಗಮನ ಎಲ್ಲೇ ಇದ್ದರೂ ಕಿವಿ ನಿಮಿರೇಳುತ್ತದೆ. ಸೇವಾನಿರತೆ , ಶಿಸ್ತು,ಬದ್ಧತೆ, ಕಷ್ಟ ಸಹಿಷ್ಣುತೆ  ಮೊದಲಾದ ಗುಣಗಳು ಸಂಘದ ಮೊದಲ ಪಾಠಗಳು. ಒಂದರ್ಥದಲ್ಲಿ ಶಿಸ್ತಿಗೆ ಸಮಾನಾರ್ಥಕವೇ ಸಂಘ.  ಮಳೆ, ಗಾಳಿ, ಅತಿವೃಷ್ಟಿ ಮುಂತಾದ ಪ್ರಕೃತಿ  ವಿಕೋಪಗಳಾದಾಗ, ಅಲ್ಲಿಗೆ ಎಲ್ಲರ ಮುಂಚೆ ಕಂದು ಚಡ್ಡಿಯ ಸ್ವಯಂ ಸೇವಕರು ಹಾಜರಿರುತ್ತಾರೆ. ಹಲವಾರು ಸ್ಥಳಗಳಲ್ಲಿ ರಕ್ಷಣಾ ಪಡೆಯ ಯೋಧರು ಆಗಮಿಸುವ ಮುನ್ನವೇ ಸ್ವಯಂ ಸೇವಕರು ಪರಿಹಾರ ಕಾರ್ಯಾಚರಣೆಯನ್ನುಪ್ರಾರಂಭಿಸಿಯಾಗಿರುತ್ತದೆ. ಹಗಲು, ಇರುಳು, ಚಳಿ, ಮಳೆ, ಬಿಸಿಲು, ಗಾಳಿ, ಊಟ , ತಿಂಡಿಯ ಪರಿವಿಲ್ಲದೆ  ಸದಾ  ಸೇವೆಯ ಅವಶ್ಯಕತೆ ಇರುವಲ್ಲಿ  ಸ್ವಯಂ ಸೇವಕರು ಸನ್ನದ್ಧ.
ಸೇನೆಯನ್ನು ಹೊರತುಪಡಿಸಿ ಇತರೆ ಯಾವುದೇ ಸಂಘಟನೆಗಳು ತುರ್ತು ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೆ  ಅದನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುವುದರಲ್ಲಿ ಸ್ವಲ್ಪವೂ ಹಿಂಜರಿಯುವುದಿಲ್ಲ.ಆದರೆ  ಈ ಮಾತು ಸಂಘದ ವಿಷಯದಲ್ಲಿ ಅಪವಾದವಾಗಿದೆ. ಘಟನಾ ಸ್ಥಳ ಹೊರತುಪಡಿಸಿ ಹೊರ ಜಗತ್ತಿಗೆ ಸಂಘದ ನಿಸ್ವಾರ್ಥ ಸೇವೆಯ ಬಗ್ಗೆ ಅರಿವೇ ಇರುವುದಿಲ್ಲ.  ಹೊಗಳಿದರೂ, ತೆಗಳಿದರೂ, ಯಾವುದೇ ಆರೋಪಗಳನ್ನು ಹೊರಿಸಿದರೂ  ಸಂಘದ ಉತ್ತರ, ಕೋಣದ ಮೇಲೆ ಮಳೆ ಹುಯ್ದಂತೆ. ಏಕೆಂದರೆ  ಸೇವೆಯೇ ಸಂಘದ ಉಸಿರು.ಇಂದಿನ ಮಾಧ್ಯಮಗಳು  ಕೂಡ ರಾಷ್ಟ್ರ ರಕ್ಷಕರ ಸೇವೆಯನ್ನು ಬಿತ್ತರಿಸುವಲ್ಲಿ ಯಾವುದೇ ಪ್ರಯತ್ನ ಮಾಡದಿರುವುದು ಖೇದಕರ.  
ಕೆಲವು ದಿನಗಳ ಹಿಂದೆ ಪ್ರಾಯಶಃ  ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲಿದ್ದನೋ ವರುಣ,  ಚಿಕ್ಕಸೂಚನೆಯನ್ನೂ  ನೀಡದೆ ಅಬ್ಬರಿಸಿ ಬೊಬ್ಬಿರಿದು ಕೊಡಗು ಮತ್ತು ಕೇರಳದ ಬಹುಭಾಗಗಳನ್ನು ಆಕ್ರಮಿಸಿಕೊಂಡ. ಜನ ಜೀವನ ಅಸ್ತವ್ಯಸ್ತ. ಜನ ಅಕ್ಷರಶಃ ಬೀದಿಗೆ ಬಂದರು .ಪ್ರವಾಹ ಪರಿಸ್ಥಿಯಿಂದಾಗಿ ತಲೆದೋರಿದ ರಸ್ತೆ ಕುಸಿತ ,ಭೂಕುಸಿತಗಳು ರಕ್ಷಣೆಯ ಎಲ್ಲಾ ಸಾಧ್ಯತೆಗಳಿಗೆ ತಡೆಗೋಡೆಗಳಾಗಿ,  ಜನರ ಜೀವನವನ್ನು ಮತ್ತಷ್ಟು ಕಂಗಾಲಾಗಿಸಿದವು. ನೋಡಿದಲೆಲ್ಲಾ ಕೆಂಪು ನೀರಿನ ಓಕುಳಿ, ರಕ್ಷಣೆಗಾಗಿ ಜನರ ಆಕ್ರಂದನ. ಪರಿಸ್ಥಿತಿಯನ್ನು ಅರಿತ ಸಂಘ, ಎಂದಿನಂತೆ ತನ್ನ ಸೇವಾಭಾರತಿ ಸಂಸ್ಥೆಯ ಮುಖೇನ ಪ್ರವಾಹ ಸಂತ್ರಸ್ತರ ಪುನರ್ವಸತಿ ಸೇವೆಯನ್ನು ಯುದ್ದೋಪಾದಿಯಲ್ಲಿ ಆರಂಭಿಸಿತು . ಸೇನಾಪಡೆಗಿಂತಲೂ ಒಂದು ಹೆಜ್ಜೆ ಮುನ್ನ ಪರಿಹಾರ ಕಾರ್ಯಕ್ಕೆ ಧುಮುಕಿದ  ಸಂಘ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಪರಿತಪಿಸುತ್ತಿದ್ದ ಅಸಂಖ್ಯಾತ  ಜನರನ್ನುಸತತವಾಗಿ ಜೀವದ ಹಂಗು ತೊರೆದು, ರಕ್ಷಿಸಿ ಮೆಚ್ಚುಗೆಗೆ ಪಾತ್ರರಾದರು. ಕಣ್ಮುಂದೆಯೇ ಕುಸಿಯುತ್ತಿದ್ದ ಗುಡ್ಡ, ಬೆಟ್ಟ, ಭಾರಿ ಸೆಳೆತದಿಂದ ಆಪತ್ತಿನಲ್ಲಿ ಹರಿಯುತ್ತಿದ್ದ ನದಿಗಳನ್ನು ದಾಟಿ ಪ್ರವಾಹ ಸಂತ್ರಸ್ತರನ್ನು ಸಾವಿರಾರು ನಿಸ್ವಾರ್ಥಿ ಸ್ವಯಂ ಸೇವಕರು ಜೊತೆಗೂಡಿ ಕಾಪಾಡಿದರು .ಸ್ಥಳೀಯ ಸೇವಕರು ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು,ಬೆಂಗಳೂರು, ಮಂಡ್ಯ, ಹಾಸನ ಅಲ್ಲದೇ ರಾಜ್ಯದ ಇತರ  ಭಾಗಗಳಿಂದ ಸ್ವಯಂ ಸೇವಕರು ಸಂತ್ರಸ್ತರ ನೆರೆವಿಗೆ ಧಾವಿಸಿದ್ದರು.

ಇದು ಸಂಘದ ಸೇವಾ ವೃತ್ತಿಯ  ಒಂದು ಉದಾಹರಣೆ . ರಾಷ್ಟ್ರೀಯ ಸಂಘದ ಸ್ಥಾಪನೆಯ ನಂತರ ಸಮಾಜದಲ್ಲಿ ಜರುಗಿದ ದುರಂತ ಕ್ಷಣಗಳಲ್ಲಿ ಸಂಘ ದೇಶಕ್ಕೆ ಭುಜಬಲವನ್ನು ನೀಡಿದೆ. ಅಂತಹ ಹಲವು ಸೇವಾ ಪಟ್ಟಿ ಕೆಳಕಂಡಂತಿದೆ:  
ಭಾರತದ ಸ್ವಾತಂತ್ರ್ಯ ಸಂಗ್ರಾಮ: ಸಾಮೂಹಿಕ ತರಗತಿಗಳ ಮೂಲಕ ಸ್ವಯಂ ಸೇವಕರಿಗೆ ಮತ್ತು ಸಾರ್ವಜನಿಕರಿಗೆ ಸ್ವಾತಂತ್ರ್ಯದ ಅಗತ್ಯ  ಮತ್ತು ಪಡೆಯುವ ವಿಧಾನವನ್ನು, ಸ್ವರಕ್ಷಣೆ ಮತ್ತು ಹೋರಾಟದ ವಿಧಾನಗಳ ಬಗ್ಗೆ ಶಿಕ್ಷಣವನ್ನು ನೀಡಿತು.
ಭಾರತದ ವಿಭಜನೆ: ವಿಭಜನೆ ಬಿಸಿಯನ್ನು ಅನುಭವಿಸಿದ ಎಲ್ಲಾ ಧರ್ಮಗಳ ಲಕ್ಷಾಂತರ  ಜನರನ್ನು ರಕ್ಷಿಸುವಲ್ಲಿ ಸಂಘದ ಪಾತ್ರ ಮಹತ್ವದ್ದು. ಈ ಕಾರ್ಯವನ್ನು ಮೆಚ್ಚಿದ ಭಾರತ ರತ್ನ ಭಗವಾನ್ ದಾಸ್ ರು ಸ್ವಯಂ ಸೇವಕರನ್ನು "Highly Spirited and self Sacrifying Boys " ಎಂಬ ಬಿರುದನ್ನೂ ನೀಡಿದರು.
ಚೀನಾ -ಭಾರತ  ಯುದ್ಧ: ಗಾಯಗೊಂಡ ಸಾವಿರಾರು ಸೈನಿಕರನ್ನು ಶಿಬಿರಗಳಿಗೆ  ಸ್ಥಳಾಂತರಿಸಿ, ವೈದ್ಯಕೀಯ ಸೇವೆ  ಒದಗಿಸುವುದರಲ್ಲಿ ನೆರವಾದರು . ಸಂಘದ ಕಾರ್ಯವನ್ನು ಶ್ಲಾಘಿಸಿ ಅಂದಿನ ಪ್ರಧಾನಿ ನೆಹರು   ಸ್ವಯಂ ಸೇವಕರನ್ನು 1963 ರ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.
ಪಾಕಿಸ್ತಾನ -ಭಾರತ ಯುದ್ಧ : ಸೈನಿಕರ ಅಗತ್ಯತೆ ಕಂಡ ಶಾಸ್ತ್ರೀಜಿ ಸಂಘದ ಸ್ವಯಂ ಸೇವಕರನ್ನು ದೆಹಲಿ ಮತ್ತು ದೇಶದ ಹಲವು ಭಾಗಗಳಲ್ಲಿ ತಾತ್ಕಾಲಿಕ ಸಂಚಾರಿ ಪೊಲೀಸರಾಗಿ ಕಾರ್ಯನಿರ್ವಹಿಸುವಂತೆ ವಿನಂತಿಸಿಕೊಂಡರು.  ಅದರಂತೆ  ಸತತ 22 ದಿನಗಳ ಕಾಲ ಸ್ವಯಂ ಸೇವಕರು ದೇಶಸೇವೆ ಮೆರೆದರು. 
ಬಾಂಗ್ಲಾ ವಿಮೋಚನೆ: ಕಾನೂನನ್ನು ಕಾಪಾಡಲು ಮತ್ತು ಅಗತ್ಯ ರಕ್ತ ದಾನಕ್ಕೆ ಮೊದಲು ಧುಮುಕಿದ್ದು  ಸಂಘದ ಸ್ವಯಂ ಸೇವಕರು.
ತುರ್ತು ಪರಿಸ್ಥಿತಿ : ಇಂದಿರಾ ಗಾಂಧಿ ಸಂಘವನ್ನು ಬಹಿಷ್ಕರಿಸಿದ್ದರೂ , ಸಾವಿರಾರು ಸೇವಕರು ತಳಮಟ್ಟದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಪುನಃ  ಸ್ಥಾಪಿಸುವಲ್ಲಿ ಯಶಸ್ವಿಯಾದರು.

1971 ಒಡಿಶಾ ಚಂಡಮಾರುತ, 1977 ಆಂಧ್ರ ಚಂಡಮಾರುತ, 1984 ಭೋಪಾಲ್ ಅನಿಲ ದುರಂತ , 2001 ಗುಜರಾತ್ ಭೂಕಂಪ, 2004 ರ ಬಂಗಾಳ ಕೊಲ್ಲಿಯ ಭೂಕಂಪ, 2006 ಸೂರತ್ ಪ್ರವಾಹ, 2013 ಉತ್ತರಖಾಂಡದ ಮೇಘಸ್ಪೋಟ, 2014 ರ ಕಾಶ್ಮೀರ ಪ್ರವಾಹ, ಹೀಗೆ ಬರೆದಷ್ಟು ಮುಗಿಯದು ಸಂಘದ ಸೇವಾ ಪ್ರವರ. ಸಾಮಾನ್ಯ ಜನರಿಗೆ ಜಾತಿ, ಮತ, ಪಂಥ  ಮತ್ತು ಧರ್ಮದ ಭೇದವನ್ನು ಮರೆತು ಪ್ರಕೃತಿ ವಿಕೋಪಗಳಲ್ಲಿ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ವಿಕೋಪ ಬಾಧಿತ ಹಳ್ಳಿಗಳನ್ನು ಪುನರ್ನಿರ್ಮಿಸುವಲ್ಲಿ,  ಸಂತ್ರಸ್ತರ ಪುನರ್ವಸತಿ, ವೈದ್ಯಕೀಯ ಸಹಾಯ ಒದಗಿಸುವಲ್ಲಿ ರಾಷ್ಟ್ರಿಯ ಸ್ವಯಂ ಸೇವಕ ಸಂಘ ಅಂದು ಇಂದು ಎಂದೆಂದೂ ಒಂದು ಹೆಜ್ಜೆ ಮುಂದು. ಸ್ವಂತ ಸ್ವಾರ್ಥಗಳನ್ನು  ಬದಿಗಿಟ್ಟು ದೇಶಸೇವೆಗೆ ಓಗೊಟ್ಟು  ದೇಹವನ್ನು ದಂಡಿಸುವ ಸೇವಕರು ರಾಷ್ಟ್ರೀಯ ಸಂಘದಲ್ಲಿ ಹೊರತು ಪಡಿಸಿ ಬೇರೆಲ್ಲಿ ಸಿಗುತ್ತಾರೆ ಅಲ್ವಾ ?

The Stranger Kisses

The Stranger Kisses

ಮಿಣಿ ಮಿಣಿ ಹೊಳೆಯುವ ಸಮುದ್ರ, ದೂರದೊಲ್ಲೊಂದು 
ಹಾಯುತ್ತಿರುವ ಹಡಗು. ದೋಣಿಗಳಲ್ಲಿ ಮೀನಿಗೆ ಬಲೆ 
ಬೀಸುತ್ತಿರುವ ಮೊಗವೀರರು. ಆಕಾಶದಲ್ಲಿ  ಪ್ಯಾರಚೂಟ್ನಲ್ಲಿ 
ಹಾರುತ್ತಿರುವ ಪ್ರಣಯ ಪಕ್ಷಿಗಳು. ಕೆಳಗೆ ದಡದಲ್ಲಿ ಕುರುಕಲು ತಿಂಡಿ, ನಿಂಬೂ ಸೋಡಾ ಮಾರುತ್ತಿರುವ ಪೆಟ್ಟಿಗೆ ಅಂಗಡಿಗಳು. ಸೂರ್ಯಸ್ನಾನ ಮಾಡಲು ಕಿನಾರೆಯಲ್ಲಿ 
ಹುಟ್ಟುಡುಗೆಯಲ್ಲಿ ಅಲೆಯುತ್ತಿರೋ ನೂರಾರು  ಪರ-ದೇಶಿಗಳು. ಅವರನ್ನು ನೊಡಲೆಂದೆ ಬರುವ ದೇಶಿ ಹುಡುಗರು. ನಗರದ ಜಂಜಾಟಗಳಿಗೆ ಬೇಸತ್ತು ಜೀವನದಲ್ಲಿ  ಎಲ್ಲಾ 
ಮುಗಿಯಿತೆಂಬತೆ ಬಿಯರ್, ಸಿಗರೇಟ್‌ ಹಿಡಿದು ಕೂಳಿತಿರೋ 
ಇಂದಿನ ಯಂಗ್‌ ಜೆನೆರೆಷನ್.

ವಾರಾಂತ್ಯ ಸುಮ್ಮನೆ ಮನೆಯಲ್ಲಿ ಹಾಯಾಗಿ ಕಳೆಯುವ 
ಸಮಯ. ಗುರುವಾರ ಸಂಜೆ‌ ಆದಿಯ ವಾಟ್ಸಪ್‌  ರಿಂಗಣಿಸಿತು. 
ಆದ್ಯಾ ವೀಕೆಂಡ್‌ ಪ್ಲಾನ್ಸ ಕೇಳಿದಳು. ಏನಿಲ್ಲವೆಂದ ಆದಿ. 
ನಂಗೂ ಒಂದು ಬ್ರೇಕ್‌ ಬೇಕು ಎಲ್ಲಾದ್ರು ಹೋಗಿ  ಬರೊಣ್ವಾ ಕೇಳಿದ್ಲು. ಪ್ಲೇಸ್‌ ತಿರ್ಮಾನ ಮಾಡೋದರ 
ಚರ್ಚೆಗಳು ಶುರುವಾಗಿ ಕೊನೆಗೆ ಕೇರಳಕ್ಕೆ ತಲುಪಿತು. ಬಸ್‌,
ರೂಮ್‌, ಬ್ಯಾಗ್‌ ಪ್ಯಾಕ್‌ ರೆಡಿಯಾಯಿತು. ಶುಕ್ರವಾರ ಸಂಜೆ 
ಇಬ್ಬರ ಸವಾರಿ ಹೊರಟಿತು.

ಆದ್ಯಾ ಮತ್ತುಆದಿಗೆ ಇತ್ತೀಚಿಗೆ ಪರಿಚಯವಾಗಿದ್ದಾದರು ಒಬ್ಬರನೊಬ್ಬರು ಚೆನ್ನಾಗಿ ಅರಿತಿದ್ದರು. ಹಾಗೆ ಒಪ್ಪಿ ಹೋಟೆಲ್‌ ರೂಂ ಶೇರ್‌ ಮಾಡಿದ್ರು. ಬೆಳಿಗ್ಗೆ ಆದ್ಯಾಳನ್ನು ಎಬ್ಬಿಸಿ 
ಹೊರಡೊದರೊಳಗೆ ಆದಿ ಎದ್ದು ರೆಡಿಯಾಗಿ  ಇನ್ನೊಂದು ನಿದ್ದೆ ಮಾಡಿದ್ದ. ಆದಿಗೆ ಹೊರಡಲು ಹತ್ತು ನಿಮಿಷವಾದರೆ, ಆದ್ಯಾಳಿಗೆ ಗಂಟೆಯ ಮೇಲೆಹತ್ತು  ನಿಮಿಷದಲ್ಲಿ ಮುರ್ನಾಲ್ಕು ಡ್ರೆಸ್ಗಳನ್ನು ಬದಲಾಯಿಸಿ 
ರೆಡಿಯಾಗಿದ್ಲು. ಆದಿಗೆ ಒಪ್ಪವಾಗಿ ರೆಡಿಯಾದ  ಆದ್ಯಾಳನ್ನು ನೋಡಿದಾಗ ಅವಳು ತೆಗೆದುಕೊಂಡ ಸಮಯ 
ಸಾರ್ಥಕವೆಂದೆನಿಸಿತು. ಆದ್ಯಾ ವಿರಳ ಕಾಯದ  ಕೃಷ್ಣವರ್ಣಿ. ಬಟ್ಟಲು ಕಣ್ಗಳು, ಶಿವನ ಜಟಾ ಮಾದರಿಯ 
ಕೂದಲು. ಮುಖಕ್ಕೆ ಒಪ್ಪುವಷ್ಟು ಮೇಕಪ್ಪು.ಎಲ್ಲಿಯೂ ಹೆಚ್ಚಿನಿಸದ ದೇಹದ ಆಂಗಿಕ ಸೌಂದರ್ಯ. ಕನಿಷ್ಟ ಮತ್ತು ಗರಿಷ್ಠ 
ಬಟ್ಟೆಗಳಲ್ಲಿಯೂ ಸುಂದರವಾಗಿ ಕಾಣುವ ಅಪೇಕ್ಷಿತೆ. ಒಟ್ಟಾರೆ ಆದ್ಯಾಳ ಅಂದ ಆದಿಯ ಕಣ್ಣುಗಳಿಗೆ ಹಬ್ಬದೂಟ 
ಉಣಬಡಿಸುತ್ತಿದ್ದವು.

ಇಬ್ಬರೂ ರೂಮಿಂದ ಹೊರಬಿದ್ದು ದಿನವೆಲ್ಲ ಸುತ್ತ ಮುತ್ತ ಸುತ್ತಿ ಒಂದಷ್ಟು ಪೋಟೋ ಕ್ಲಿಕ್ಕಿಸಿ ಸಂಜೆ ಬಿಯರ್‌ ಹೀರಿ, ಸೀಪು಼ಡ್ಡಿನ ಬಫೆ಼ಟ್‌ ತಿಂದು ರೂಮಿಗೆ ಲ್ಯಾಂಡ್‌ ಆದರು. ಭಾನುವಾರ 
ಬೆಂಗಳೂರಿಗೆ ಹಿಂತಿರುಗಬೇಕೆಂದು ಪ್ಲಾನ್‌ ಆಗಿತ್ತು. ಆದರೆ
ಆದ್ಯಾಳಿಗೆ ಅಲ್ಲಿಯ ವಾತಾವರಣ ತುಂಬಾ ಹಿಡಿಸಿತ್ತು. ಇವರು ತಂಗಿದ್ದ ಸ್ವಲ್ಪ ದೂರದಲ್ಲಿ ಇನ್ನೋಂದು ಬೀಚ್‌ ಇದೆ ಹೋಗಣ 
ಎನ್ನುವುದು ಅವಳ ಹಠ. ಬೆಂಗಳೂರಿಗೆ  ವಾಪಸ್‌ 
ಹೊರಡೋಣ ಎಂದು ಆದಿಯ ವಾದ. ಇಬ್ಬರ ಮಾತಿನ 
ಚಕಮಕಿಯ ನಂತರ ಆದ್ಯಾ ಆದಿಗೆ ಓಪ್ಪಿಸಿದಳು. ಕೇರಳ 
ಸರ್ಕಾರದ ಲಟಾರಿ ಬಸ್ಸಿನಲ್ಲಿ ಸವಾರಿ ಇನ್ನೊಂದು ಜಾಗಕ್ಕೆ 
ಹೊರಟಿತ್ತು. ಬಸ್‌ ಲಟಾರಿಯಾಗಿದ್ದರು ವೇಗ ಮಾತ್ರ 
ವಿಮಾನದ್ದು. ತಲುಪುವ ವೇಳೆಗೆ ಬಸ್ಸು ಬಾಡಿಯ ಎಲ್ಲಾ 
ಅಂಗಗಳ ಪರಿಚಯ ಮಾಡಿಕೊಟ್ಟಿತ್ತು.

ಬಸ್‌ ಇಳಿದು ರಾತ್ರೆ 10 ರ ಹೊತ್ತಿಗೆ ಆಟೋ ಏರಿ ಇಬ್ಬರೂ 
ತಂಗುವ ನಿಲ್ದಾಣದ ಕಡೆಗೆ ಹೊರಟರು.. ಹೋಟೆಲ್‌ ಚೆಕ್‌ ಇನ್‌ಮಾಡಿ, ಬಸ್ಸಿನ ಏರಿಳಿತಕ್ಕೆ ಜಜ್ಜಿದ ದೇಹದ  ಭಾಗಗಳಿಗೆ 
ವಿಶ್ರಾಂತಿ ನೀಡಿ, ಚೆನ್ನಾಗಿ ನಿದ್ರಿಸಿ ಎದ್ದು ಮುಂಜಾನೆ ಕಡಲ 
ತಡಿಯ ಕಡೆ ಹೊರಟರು. ಆದಿ ವಿಶಾಲ ಸಮುದ್ರ, ದಡದ 
ಉದ್ದಕ್ಕೂ ಅಂಗಡಿಗಳ ಸಾಲು, ಇದು ನನ್ನ ಜಾಗವೆಂದು ಆಗಾಗಕಾಲಿಗೆ ತಾಗಿ ತಿಳಿಸುವ ಅಲೆಗಳು, ಬಲೆಗಳನ್ನು  ಹಣಿಯುತ್ತಿರುವಮೀನುಗಾರರು. ಜಾಗಿಂಗ್‌, ವಾಕಿಂಗ್‌, 
ಯೋಗದ ನಾನ ಭಂಗಿಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಜನರು,ಮರಳಿನ ಮೇಲೆ ಬಿಟ್ಟು ಹೋದ ಹೆಜ್ಜೆಗಳ ಗುರುತು, 
ಅಲೆಗಳ ಜೊತೆ ತೇಲಿ ಬಂದು ಒಡೋಡಿ ಹಿಂತಿರುಗುತ್ತಿರುವ 
ವಿವಿಧ ಜಲಚರಗಳು, ಅಲೆಗಳೊಂದಿಗೆ ಬಾಜಿಗಿಳಿದ ಸರ್ಪ಼ರ್ಗಳು,ಇರುಳೆಲೆಲ್ಲ ಸಮುದ್ರದಲ್ಲಿ ಮಿಂದು ಮೈ ಬೆಚ್ಚಾಗಾಗಿಸಲು 
ಆಕಾಶವೇರುತ್ತಿರುವ ಸೂರ್ಯ. ಇವೆಲ್ಲ ಗಮನಿಸಿ ಇಲ್ಲಿಗೆ 
ಬಾರದಿದ್ದರೆ ಖಂಡಿತವಾಗಿ ಮಿಸ್‌ ಮಾಡಿಕೊಳ್ಳುತಿದ್ದೆವು 
ಒಳ್ಳೆದಾಯಿತೆಂದು ಯೋಚಿಸಿ ಬನಿಯನ್‌ ಮತ್ತು ಶಾರ್ಟ್ಸ ಕಳಚಿನೀರಿಗಿಳಿದ.ಆದ್ಯಾ ದಡದ ಮೇಲೆ ಹಾರುವ ಮುಂಗುರಳನ್ನು ಮತ್ತೆ ಮತ್ತೆ ಬದಿಗೊತ್ತಿ, ಕಣ್ಗಳ ಮೇಲೆ ಕನ್ನಡಕವನ್ನು ಇರಿಸಿ , ಹಾಕಿದ್ದ ಗೌನ್‌ಥರದ ಅರಿವೆಯನ್ನು ಸಡಿಲಗೊಳಿಸಿ ಗಾಳಿಗೆ 
ಹಾರಲು ಬಿಟ್ಟು, ಸ್ಲಿಪ್ಪರನ್ನು ಕೈಯಲ್ಲಿ ಹಿಡಿದು ವಾಪಸ್ಸು ಹೋಗುವ ದಿನವನ್ನು ಇನ್ನೇರಡು ದಿನ  ಮುಂದೆ ತಳ್ಳುವ ಆಲೋಚನೆಯಲ್ಲಿ ಅಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ 
ಓಡಾಡುತಿದ್ದಳು. ಆಫೀ಼ಸ್ನ ಮ್ಯಾನೆಜರ್ಗೆ ಪೂಸಿ ಹೊಡೆದು  ರಜೆಯನ್ನು ಮುಂದುವರೆಸಿಕೊಂಡಳು.

ನೈಟ್ ಲೈಫ್ ಕಳೆಯಲು ಹೇಳಿಮಾಡಿಸಿದ ಜಾಗ. ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಹೊಟ್ಟೆಗಿಷ್ಟು ಹಿಟ್ಟನ್ನು ಹಾಕಿ ಒಂದು 
ಸುತ್ತು ಶಾಪಿಂಗ್ ತೆರಳಿದರು. ಆದ್ಯಾ ಖುಷಿಯಿಂದ ಎಲ್ಲಾ 
ಅಂಗಡಿಗಳನ್ನು ಒಳಹೊಕ್ಕು ಹೊರಬರುತ್ತಿದ್ದಳು. ಆದಿ ಅಲ್ಲೇ ಸುತ್ತ ಮುತ್ತ ಫೋಟೋಗಳನ್ನು ತೆಗೆಯುತ್ತಾ  ಕಾಲಹರಣ 
ಮಾಡುತ್ತ, ಆದ್ಯಾ ಕೊಂಡ ಕೆಲವು ವಸ್ತುಗಳಿಗೆ ಪೇ ಕೂಡ 
ಮಾಡುತಿದ್ದ. ಮುಂದುವರೆದು ಒಂದು ಬಾಡಿ ಮಸಾಜ್ ಶಾಪ್ನ ಎದುರು ನಿಂತು ಹಿಂದಿನ ದಿನ ಬಸ್‌  ಪ್ರಯಾಣದಲ್ಲಿ 
ಜಖಂಗೊಂಡ ಮೈಯನ್ನು ಸ್ವಲ್ಪ ಹುರಿಗೊಳಿಸಲು ಮಸಾಜ್ ಪ್ಯಾಕೇಜ್ಗಳನ್ನು ಪರಿಶೀಲಿಸತೊಡಗಿದರು.  ಒಂದನ್ನು ಆಯ್ಕೆ 
ಮಾಡಿ,ಒಂಟಿಯಾಗಿ ಉರಿಯುತ್ತಿದ್ದ ದೀಪದ ರೂಮಿಗೆ ಎಣ್ಣೆಯ ಜಿಗುಟು ವಾಸನೆ ಸುಸ್ವಾಗತಿಸಿತು. ಒಳಹೊಕ್ಕು ಗುಪ್ತ 
ಕ್ಯಾಮರಾಗಳಿಗೆ ಸಾಧ್ಯತೆಯ ಬಗ್ಗೆ ಚಿತ್ತವಿಟ್ಟು, ನಿರ್ವಸ್ತ್ರಗೊಂಡು,ಮೈತುಂಬಾ ಎಣ್ಣೆ ತಿಕ್ಕಿಸಿಕೊಂಡು ಕಂಬಳದಲ್ಲಿ ಓಡುವ 
ಕೋಣಗಳಂತೆ ಕಾಣುತ್ತಿದ್ದರು. ಎಷ್ಟು ಉಜ್ಜಿದರೂ ಹೋಗದ 
ಜಿಡ್ಡನ್ನು ತಿಕ್ಕಿ ತೊಳೆದು, ಸ್ನಾನ ಮಾಡಿ ಮತ್ತೆ  ಸಮುದ್ರದಂಚಿಗೆ ಹೋಗಿ ಕುಳಿತರು. ಸೂರ್ಯ ತನ್ನ ಹಗಲಿ‍ನ 
ವೃತ್ತಿ ಮುಗಿಸಿದಣಿದು ವಿಶ್ರಾಂತಿ ತೆಗೆದುಕೊಳ್ಳಲು ಸಮುದ್ರಕ್ಕೆ 
ಇಳಿಯುತ್ತಿದ್ದ.ಆದ್ಯಾ ಸೀಗೆರೆಟ್ ಸೇದುತ್ತಾ ಹೊಗೆಯನ್ನು ರಿಂಗುರಿಂಗಾಗಿ ಬಿಡುತ್ತಾ ಪಕ್ಕದಲ್ಲಿ ಕೂತಿದ್ದಳು. ಬೆಳಿಗ್ಗೆ ತಿಂದಮೇಲೆ ಹೊಟ್ಟೆಗೆನು. ಇಳಿದಿರಲಿಲ್ಲ. ಹೊಟ್ಟೆ ಚುರುಗುಟ್ಟಲು  ಶುರುವಿಟ್ಟಿತ್ತು.ಕಡಲ ಮರಳರಾಶಿಯಿಂದ ಎದ್ದು ಬಟ್ಟೆಗಳನ್ನು ಕೊಡಕಿ ಹೋಟೆಲ್ಗೆ ತೆರಳಿ Meat Balls ಸ್ಪೆಗೆಟ್ಟಿಯನ್ನು ಅರ್ಡರ್‌ ಮಾಡಿದಳು ಆದ್ಯಾ.‌ 
ಸುಮ್ಮನಿರಲಾರದ ಆದಿ ಆದ್ಯಾಳ ಬಳಿ ಯಾವ Meat Balls ಎಂದು ಕೇಳಿದ. ಕೇರಳದ ಜಾಗ, ಹೆಚ್ಚು ವಿದೇಶಿಯರು ಸುತ್ತಾಡುವ ಜಾಗ, ವೇಟರ್‌ ಆದ್ಯಾಳಿಗೆ Beef Meat Balls ಎಂದ. ಆದಿಗೆ ಅರಿವಿಲ್ಲದೆ ಮೊದಲ ಬಾರಿಗೆ Beef 
ತಿಂದು ಅವನ ಮುಖ ಪೇಲವಾಯಿತು. ಆದ್ಯಾಳಿಗೂ ಆದಿಯ 
ಮುಖ ನೊಡಿ ಪಾಪವೆನಿಸಿತು. ನನಗೂ ಗೊತ್ತಿರಲಿಲ್ಲ ಕಣೋ, Sorry ಕೇಳಿದಳು. ಬೇಜಾರಾಗಿದ್ದಳು. ಆದಿಗೆ ಗೋವು ಹುಟ್ಟಿದ ತರುವಾಯ ಜೊತೆಗೆ ಬೆಳೆದ ಜೀವಿ, ಭಾವನಾತ್ಮಕ ಪ್ರಾಣಿ. 
ರೂಮಿಗೆ ಹೋಗಿ ತಿಂದ ಆಹಾರವನ್ನು ಪೂರ್ತೀ ವಾಂತಿ 
ಮಾಡಿದ್ದ.

ಆದಿ ದ್ವಂದ್ವ ಮನಸ್ಥಿತಿಯಲ್ಲಿ ಟ್ರಿಪ್ಗೆ ತೆರಳಿದ್ದ. ಕಾರಣ ಊರಿನಲ್ಲಿತಾಯಿಗೆ ಸ್ವಲ್ಪ ಆರೋಗ್ಯವಿರಲಿಲ್ಲ.  ಅಪ್ಪನಿಂದ ಆದಿಗೆ ಫೋನ್ ಬಂತು. ಆದಿಯ ಅಕ್ಕ ಇನ್ನೂ 
ಅಮ್ಮನನ್ನು  ನೋಡಲು ಬಂದಿಲ್ಲ,ನಾನು ಕೇಳಿದರೆ, ಅವಳು ಊರಿಗೆ ಬಂದರೆ ಅಲ್ಲಿಯ ಶೀತ ವಾತವರಣಕ್ಕೆ ಮಗುವಿಗೆ 
ಹುಷಾರಿಲ್ಲವಾಗುತ್ತದೆ ಎನ್ನುವ ಕಾರಣ ನೀಡಿದಳು ಎನ್ನುತ್ತಾ 
ಅಪ್ಪ ಕಣ್ಣೀರಿಡುತ್ತಾ ಹೇಳಿದರು. ಅಪ್ಪನಿಗೆ ಸಮಾಧಾನ 
ಪಡಿಸುವ ವೇಳೆಗೆ ಆದಿಯ ಕಣ್ಣುಗಳಲ್ಲಿಯೂ ನೀರಿಳಿಯಲು ಶುರುವಾಗಿತ್ತು.ಆದ್ಯಾಳಿನ್ನು ಸಮಾಧಾನ, ಸಂತೈಸಲು ತಿಳಿಯದ ಹುಡುಗಿ.  ಅವಳಿಗನಿಸಿದ ಉಪಾಯಗಳನ್ನು ಹೇಳಿ ಪ್ರಯತ್ನಿಸಿದಳು. 
ಆದಿಯ ಅಳು ನಿಲ್ಲಲಿಲ್ಲ. ಊರಿಗೆ ಹೋಗಲು ಇವನ ಕೆಲ್ಸ. 
ಅಕ್ಕ ಹೋಗಿಲ್ಲವೆಂದು ಅವಳ ಮೇಲಿನ ಕೋಪ. ಏನು 
ಮಾಡಬೇಕೆಂದು ತಿಳಿಯದೆ ಬಾರೊಂದಕ್ಕೆ  ಹೊಕ್ಕು ಬಿಯರ್ ಕೊಂಡ, ಇವನ ದುಃಖಕ್ಕೆ ನಕ್ಷತ್ರಗಳೆಲ್ಲ ನಗುತ್ತಿರುವಂತೆ ಕಂಡು 
ಕೆಳಗೆ ಕೂತು ಜೋರಾಗಿ ಅಳುತ್ತಾ ಬಿಯರ್ ಹೀರಿದ. ಆದ್ಯಾ 
ಪಕ್ಕದಲ್ಲಿ ಬಂದು ಸೀಗೆರೆಟ್ಹಚ್ಚಿ ಕುಳಿತಿದ್ದಳು. ಆದಿ ಮೊದಲ 
ಬಾರಿ ಅಂದು ಅವಳ ಬಳಿ ಸೀಗೆರೆಟ್ ಕೇಳಿ ಸೇದಿದ್ದ. ಸಾಕಷ್ಟು ಹರಟಿದ್ದರು.. ಅಷ್ಟರೊಳಗೆ ಆದ್ಯಾಳ ಅಲೋಚನೆ ಮುಂದಿನ  ತಿಂಗಳಲ್ಲಿ ಪ್ಲಾನ್ ಮಾಡಿದ್ದ ಟ್ರಿಪ್‌ ಬಗ್ಗೆ ಹೊರಳಿತ್ತು, ಅದರ 
ಸಾಧಕತೆ ಈಗ ಡೋಲಾಯಮಾನ. ಆದ್ಯಾ,ಆದಿಯೆಂದು 
ಕಳಕಳಿಯಿಂದ ಕರೆದು ಪ್ಲೀಸ್ ಆ ಟ್ರಿಪ್ಪನ್ನು ಮಾತ್ರ ಕ್ಯಾನ್ಸಲ್ ಮಾಡ್ಬೇಡ ಕಣೋ, I am very Excited !!! ಗೊತ್ತಾ..ಏನಾದ್ರು ಮಾಡಿ ಬಾರೋ ಅಂತ 
ಪ್ರಾಮಿಸ್ ತೆಗೆದುಕೊಂಡಳು. ಅಲ್ಲಿಗೆ ಆದಿಗೆ ಆದ್ಯಾ ಇನ್ನಷ್ಟು 
ಹತ್ತಿರವಾಗಿದ್ದಳು.

ಇಬ್ಬರೂ ಮಾತಾಡುತ್ತಾ ಅಲೆಗಳ ಸಂಗೀತಕ್ಕೆ ಕಿವಿಕೊಟ್ಟು ಕೂತಿದ್ದರು. ಆದ್ಯಾ ಇನ್ಸ್ಟಾ, ವಾಟ್ಸಾಪ್ ಚಾಟ್ ಮಾಡುತ್ತಿದ್ದರೆ, ಆದಿ ಮೊಬೈಲ್ನಲ್ಲಿ ಕವಿತೆ ಬರೆಯುತ್ತಿದ್ದ.
 
ಅಲೆಗಳು ಹೊರಟಿವೆ ಹೃದಯದ ಕಡಲಲ್ಲಿ
ಹುಡುಕುತಾ ತೀರದೀ ಕುಳಿತಿರೋ ಬಡಿತವ
ಹೇಳಲು ನೆನಪಿನ ವಿದಾಯವ ಬರುತಿವೆ ಸಾಲಲ್ಲಿ
ಹೋಗಲು ಆಗದೆ ಉಳಿಯಲು ಆಗದ ಪ್ರೀತಿಯ ಕಳಕಳಿ.....

ಅಷ್ಟರಲ್ಲೇ ಇನ್ನೊಂದು ಜೋಡಿ ತಮಿಳುನಾಡ ಕಡೆಯವರು 
ಬಂದು ಮ್ಯಾಚಸ್ ಇದ್ಯಾ ಕೇಳಿದರು. ಆದ್ಯಾಳ ಕೈಲಿದ್ದ ಲೈಟರ್ ಕೊಟ್ಟಳು. ಅಮರ್ ಮತ್ತು ಅರ್ಪಿತಾ ಪಕ್ಕದಲ್ಲಿ ಕುಳಿತರು. ಪರಿಚಯವಾಯಿತು. Both are Committed. ಅವರು ಕೈಲಿದ್ದ ವೀಡನ್ನು ಹಚ್ಚಿ ಕುಳಿತರು. ಆದ್ಯಾಳು ಸೇದಿದಳು.ಆದಿಯೂ ಕೂಡ.

ಎರಡು ಮೂರು ಪಫ್ ಸೇದುವ ಒಳಗಡೆ ಅರ್ಪಿತಾ ಮತ್ತು 
ಆದ್ಯಾ ಇಬ್ಬರನ್ನು ನಶೆ ಮಾತಾಡಿಸಲು ಪ್ರಾರಂಭಿಸಿತ್ತು.ಅರ್ಪಿತಾ ಅಲೆಗಳ ಶ್ರುತಿಗೆ ಕುಣಿಯಲು ಶುರು ಮಾಡಿದರೆ, ಆದ್ಯಾ 
ಗೆಲಿಲಿಯೋ ಥಿಯರಿಗಳನ್ನು ಮೀರುವಂತೆ ಆಕಾಶವನ್ನು 
ಬೀಚ್ನಲ್ಲಿ ಮಲಗಿ‍ ವರ್ಣಿಸಲು ಶುರುಮಾಡಿದ್ದಳು. ನಶೆಯ 
ಥಿಯರಿ ಮುಗಿಯುವ ಸೂಚನೆಗಳೆ ಕಾಣಲಿಲ್ಲ. Adya was shivering being High...ಅವಳ ಮೈಯೆಲ್ಲ ಗಡ ಗಡ ನಡುಗಲು ಶುರುವಾಗಿತ್ತು. ಆದಿಗೆ ಮನದ ಮೂಲೆಯಲ್ಲಿ ಭಯವು ಶುರುವಾಗಿತ್ತು. 
ಮೂರು ಜನರಿಗೂ ಬಿಡದಂತೆ ಒಬ್ಬಳೇ ಮಾತಾಡುತ್ತಿದ್ದಳು. 
ಆದ್ಯಾ ಸಾಕು ಅವರಿಬ್ಬರು ಕಪಲ್ಸ್ ಕಣೆ ಪ್ರೈವೆಸಿ ಕೋಡಣ 
ಎಂದು ಹಲವು ಬಾರಿ ಆದಿ ಹೇಳಿದರು ಅವಳು ಕಿವಿಗೆ 
ಹಾಕಿಕೊಳ್ಳಲಿಲ್ಲ. ನಶೆಯೆರಿದ್ದ ನಾಲಿಗೆ ಲಂಗು ಲಗಾಮಿಲ್ಲದೆ 
ಉಸುಕಿನಲ್ಲಿ ಅಲೆಯುತಿತ್ತು. ಸಾಕಷ್ಟು ಸಮಯದ ನಂತರ ಬೀಚಿನಿಂದ ಮೇಲೆದ್ದು ಹೊರಟರು. ಆದಿ ಆದ್ಯಾಳ ಕೈ ಹಿಡಿದು 
ರೂಮಿಗೆ ಕರೆದುಕೊಂಡು ಹೋದ. ರೂಮ್ ಬಳಿ 
ಹೋಗುವವರೆಗೂ ಆದ್ಯಾಳಿಗೆ ಅನುಮಾನ. ನಶೆಯಲ್ಲಿ 
ನೀನೇಲ್ಲೋ ನನ್ನನ್ನ ಬೇರೆ ಕಡೆಗೆ ಕರ್ಕೊಂಡು ಹೋಗ್ತಾ 
ಇದ್ದೀಯ, ನಂಗೇನುಮಾಡ್ಬೇಡ ಪ್ಲೀಸ್ ಎನ್ನುವ  ತೊದಲುವ 
ದನಿಯಲ್ಲಿ ಭಯವಿತ್ತು. ಫ್ರೆಶ್ ಆಗಿ ರೂಮಿನಲ್ಲಿ ಮಲಗಿದಳು. ಒಂದೇ ಬೆಡ್ ಶೇರ್ ಮಾಡುತ್ತಿದ್ದ ಆದಿ ಇಂದು ನೆಲದ ಮೇಲೆ ಮಲಗಿದ್ದ.

ಆದಿ ರೂಮಿನ ಬಾಗಿಲು ನಾಕ್‌ ಮಾಡಿದ, ಬಾಗಿಲು 
ತೆಗೆದುಕೊಂಡಿತು. ಆದ್ಯಾ ಡ್ರೆಸ್ ಚೇಂಜ್ ಮಾಡುತ್ತಿದ್ದಳ್ಳು.  ನಶೆಯಲ್ಲಿ ಆದಿ ಹೋದ ಅರಿವು ಕೂಡ ಅವಳಿಗಿರಲಿಲ್ಲ. 
ಬಾರೋ ಪರ್ವಾಗಿಲ್ಲವೆಂದಳು. ಅಲ್ಲೇ ಬಾಗಿಲ ಬಳಿಯಿಂದ ಅವಳ ಮೈಯ ನಿಲುವು, ತೊಟ್ಟ ರಾತ್ರಿಯ ತೆಳುವಾದ ಗೌನ್, ಅವಳ ನಡು, ಉಬ್ಬಿದ ಎದೆ, 
ತುರುಬು ಕಟ್ಟಿದ್ದ ಕೂದಲು ನೋಡಿ ಆದಿಗೆ 
ಬ್ರಾಂತಿಯಾದಂತಾಯಿತು. ಹೀಗೆ ಹೆಣ್ಣಿನ ಅಂದವನ್ನು ಅಷ್ಟು 
ಹತ್ತಿರದಿಂದ ಸವಿದದ್ದು ಮೊದಲಬಾರಿ. ಆದ್ಯಾ ಯಾಕೋ ಆದಿ ಏನಾಯ್ತೋ ಮಾತೇ ಆಡ್ತಿಲ್ಲ ಎಂದಳು. ಆದಿಗೆ ತನ್ನೆದುರಿಗೆ ನಿಂತ ಆದ್ಯಾಳನ್ನು ಮಾತಾಡಿಸದೆ ಅವಳನ್ನು ಬಾಚಿ ಬಿಗಿದಪ್ಪಿಕೊಂಡು ದೇಹದ ಕೋಮಲತೆಯನ್ನುಮನಸಾರೆ  ಅನುಭವಿಸಬೇಕು 
ಎನಿಸಿತು. ಅವಳ ತೊಳನ್ನು ಬಳಸಿ ತನ್ನ ಎದೆಗೆ ಅವಳ 
ಎದೆಯನ್ನು ಬಿಗಿದುಕೊಂಡು ತುಟಿಗಳ ಹಸಿವನ್ನು ಅವಳ ಕೆನ್ನೆ, ತುಟಿಗಳ ಮೇಲೆ ನೀಗಿಸಿಕೊಂಡು ಅವಳ ಮೈಮೇಲೆ  ಮೃದುವಾಗಿ ಕೈಯಾಡಿಸಿದ. ಆದ್ಯಾ ನಾಚಿಕೆಯಿಂದ  ಆದಿಯನ್ನು ತಳ್ಳಿ ದೂರ ಚಿಮ್ಮಿದಳು.
ಮತ್ತೊಮ್ಮೆ ಹತ್ತಿರ ಹೋಗಲು ಆದಿ ಪ್ರಯತ್ನಿಸಿದ. ಆದಿಗೆ 
ಅಷ್ಟರಲ್ಲಿ ಬಾಯರಿಕೆಗೆ ಎಚ್ಚರವಾಯಿತು. ಕಂಡ ಕನಸಿಗೆ 
ಅವನಿಗೆ ಅಸೂಯೆಯಾಗಿ ನೀರು ಕುಡಿಯಲು ಮುಂದಾದ. 
ಎದ್ದವನ ದೃಷ್ಟಿ ಮಂಚದ ಕಡೆಗೆ ತಿರುಗಿತು.ಆದ್ಯಾ ದಣಿದು ಮಲಗಿದ್ದಳು. ನಿದ್ರಿಸಿದ ನಿಲುವುಗಳು ಸರಿಯಿರಲಿಲ್ಲ. ಮೈಮೇಲೆ ಹೊದ್ದಿದ್ದ ಹೊದಿಕೆ ಕೆಳಬಿದ್ದಿತ್ತು.  ಸರಿಯಾಗಿ ಆದ್ಯಾಳಿಗೆ ಹೊದಿಸಿ ನೀರು ಕುಡಿದು ಮಲಗಿದ.
 
ಮರುದಿನ ಸಂಜೆ ವಾಪಸ್ ಬೆಂಗಳೂರಿಗೆ ಹೊರಡಬೇಕು 
ಅಂದುಕೊಂಡು ಮತ್ತೆ ಬೆಳಗ್ಗಿನ ತಿಂಡಿ ಮುಗಿಸಿ  ಸಮುದ್ರದ ಕಡೆ ಹೊರೆಟೆರು. ಅಮರ್ ಮತ್ತು ಅರ್ಪಿತಾ 
ದಾರಿಯಲ್ಲಿ ಸಿಕ್ಕಿದರು. ರಾತ್ರಿ ನಡೆದ ಆದ್ಯಾಳ ಥಿಯರಿ  ನೆನದು ನಕ್ಕು ಸೆಲ್ಫಿ ತೆಗೆದುಕೊಂಡು ಕೆಫೆಯಲ್ಲಿ ಕುಳಿತು 
ಮದ್ಯ ಮಿಶ್ರಿತ ಮೋಜಿಟೋ ಅರ್ಡರ್ ಮಾಡಿದರು. 
ಮೋಜಿಟೊಗಳ ಮೇಲೆ ಮೋಜಿಟೋ  ಅರ್ಡರ್ ಆಗುತ್ತಾ ಹೋದವು, ಪ್ಯಾಕುಗಟ್ಟಲೇ ಸೀಗೆರೆಟ್ ಸುಟ್ಟವು.  ನಶೆಯಲ್ಲಿ ಸಿಗೇರಿಟಿನ ತುದಿ ಬುಡ ತಿಳಿಯದ ಪರಿಸ್ಥಿತಿಗೆ ಆದ್ಯಾಮತ್ತು  ಅರ್ಪಿತಾ ತಲುಪಿದ್ದರು.  ಮದ್ಯಾಹ್ನವಾಗುವ ಹೊತ್ತಿಗೆ ಇಬ್ಬರು ನಶೆಯಲ್ಲಿ ತೇಲಿ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಹೊಗೆ  ಉಗುಳಲು ಶುರುವಾಗಿತ್ತು. ಆದ್ಯಾ ಮತ್ತು ಅರ್ಪಿತಾ ಕಿಸ್ಗಳ 
ಸರಣಿಯೇ ಹರಿಸಿದ್ದರು. ಹಾಕಿದ ಟಾಪ್ ಎತ್ತಿ ಬೆಲ್ಲಿ ಡ್ಯಾನ್ಸ, ಕೈ ಕೈ ಹಿಡಿದು ವಿವಿಧ ನೃತ್ಯ ಮಜಲುಗಳನ್ನು ನೀಡಿ ನಮ್ಮ ಬಾಲ್ಯದಫೆಂಟಾಸಿಗಳನ್ನು ಕಣ್ಮುಂದೆ ತಂದು ಕೆಫೆಯಲ್ಲಿ ನೆರೆದ ಇತರ 
ಜನಗಳಿಗೆ, ಕೆಫೆಯ ಟೆಂಡರ್ಸ್ಗಳಿಗೆ ಬಿಟ್ಟಿ ಮನೋರಂಜನೆಯನ್ನುನೀಡಿದರು. ಆದಿಗೆ ತಲೆಯಲ್ಲಿ ಸಲಿಂಗ ಪ್ರೇಮಿಗಳ ವಿಚಾರಗಳುಬರುತಿದ್ದವು.  ಆದಿ ಮತ್ತು ಅಮರ್ ಮೂಖ ಪ್ರೇಕ್ಷಕರು. ಸಿಕ್ಕ  ಸಮಯವನ್ನು ಬಳಸಿದ ಅಮರ್‌ ಆದ್ಯಾಳ ತುಟಿಗಳನ್ನು ಸವಿದ.ಅರ್ಪಿತಾ ಆದಿಯಿಂದ ಕಿಸ್‌ ಬಯಸಿ  ಅವನ  ಕಡೆಗೆ ತಿರುಗಿ ಕಣ್ಣಿನಲ್ಲಿ ಸನ್ನೆ ಮಾಡಿದಳು. ಆದಿ ನಿರಾಕರಿಸಿ 
ಅರ್ಪಿತಾಳ ಹಣೆಗೆ ಚುಂಬಿಸಿದ.

ಅಮರ್ ಮತ್ತು ಅರ್ಪಿತಾ ಇವರಿಬ್ಬರಿಗೂ ಇನ್ನೊಂದು ದಿನ ಉಳಿದು ಹೊರಡಿ,ಅವರು ನಾಳೆಯೇ ಹೊರಡುತ್ತೇವೆಂದು ಒತ್ತಾಯ ಮಾಡುತಿದ್ದರು. ಆದ್ಯಾಳಿಗೆ ಅಲ್ಲಿರುವ ಬಯಕೆ, ಆದರೆ ಆದಿಯ ಮನಸ್ಸು ಕದಡಿತ್ತು. ಅಲ್ಲಿಂದ ಹೊರಟರೆ ಸಾಕೆನ್ನುವ ಮನಸ್ಥಿತಿಗೆ ತಲುಪಿದ್ದ. ಆದ್ಯಾಳನ್ನು ಒಪ್ಪಿಸಿ ಟೇಬಲ್ನಿಂದ ಮೇಲೆದ್ದ. ಅಮರ್ ಆದ್ಯಾಳ ಕೈ, ಅರ್ಪಿತಾ ಆದಿಯ ಕೈ ಹಿಡಿದು ಕಿನಾರೆಯಲ್ಲಿ ನಡೆಯುತ್ತಿದ್ದರು. ಅಮರ್ ಮತ್ತು ಆದ್ಯಾ ನಡಿಗೆಯನ್ನು Enjoying Fullest. ಅರ್ಪಿತಾ ಆದಿಯ ಬಳಿ ಮುಂದಿನಬಾರಿ ಇನ್ನೊಮ್ಮೆ  ಭೇಟಿಯಾಗೋಣ, ಮೆಸೇಜ್ ಮಾಡುತ್ತಿರು,ಇಲ್ಲಿಂದಾ ಹೋದ ಕೂಡಲೇ ನೀನು ನನ್ನನ್ನಾ ಮರೆತೋಗ್ತಿಯಾ ಅಲ್ವಾ, ಹೀಗೆ ಹಲವು ವಿಚಾರಗಳನ್ನು ಹೇಳುತಿದ್ದರೆ, ಆದಿಗೆ ಅವನೊಳಗಿನ ಸಂದಿಗ್ಧತೆ ಅವನನ್ನು ಚುಚ್ಚುತಿತ್ತು. ಒಂದೆಡೆ ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿರುವಾಗ ಇವನಿಲ್ಲಿ ಹೀಗೆ ಸುತ್ತಾಡುತ್ತಿರುವುದು ಸಮಂಜಸವೇ ? ಇನ್ನೊಂದು ಕಡೆ ಪರಿಸ್ಥಿಯ ಅರಿವಿದ್ದರೂ ಮುಂದಿನಾ ಟ್ರಿಪ್ಗೆ ಮಿಸ್ ಮಾಡದೇ ಬರಬೇಕೆಂಬಾ ಪ್ರಾಮಿಸ್ ತೆಗೆದುಕೊಂಡ ಆದ್ಯಾಳ ವರ್ತನೆ ಇವನಿಗೆ ಬೇಸರತರಿಸಿತ್ತು. ಆದ್ಯಾಳಿಗೆ ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಬೇಕಾ ಅಥವಾ ಹೊತ್ತೆತ್ತಾ ತಾಯಿಯ ಕಷ್ಟಗಳಿಗೆ ಹೋಗಿ ಹೆಗಲು ಕೊಡಬೇಕೆಂಬ ಇಕ್ಕಟ್ಟಿನಲ್ಲಿ ಆರ್ಪಿತಾಳಾಡಿದ ಯಾವ ಮಾತನ್ನು ಆದಿ ಕಿವಿಗೆ ಹಾಕಿಕೊಳ್ಳಲಿಲ್ಲ. ಕೆಂಪಾದ ಆಕಾಶದಲ್ಲಿ ಮುಳುಗುತ್ತಿರುವ ಸೂರ್ಯನನ್ನು
ತದೇಕ ಚಿತ್ತದಿಂದ ಆದಿ ನೋಡುತ್ತಿದ್ದ.


ಕೈಕೊಟ್ಟ ಹುಡುಗಿ

ಅಜ್ಜಿ ಶುಂಠಿ ನಿನ್ನ ಅಜ್ಜಿ ಶುಂಠಿ 
ಮಾಡೇ ಬಿಟ್ಯಲ್ಲ ನನ್ನ ಒಂಟಿ 
ನೀನು ಈಗ ಪಕ್ಕ ಆಂಟಿ 
ನಾನು ಮತ್ತೆ ಫುಲ್ ಫೋರ್ ಟ್ವೆಂಟಿ 
ಡೈಲಿ ಎಣ್ಣೆ ಅಂಗಡಿ ನನ್ನ ಡ್ಯೂಟಿ 
ಫುಲ್ ಬಾಟ್ಲಿ ಎಂಟಿ  ಎಂಟಿ

ಹೇಗೋ ಇದ್ದೆ ನಾನು ರಿಕ್ಷಾ ಓಡ್ಸಕೊಂಡು
ಸೈಕಲ್ ತುಳಿಯಕ್ಕೆ ಶುರುಮಾಡಿದೆ ನಿನ್ನ ನೊಡ್ಕೊಂಡು
ಇರೋ ಕೆಲ್ಸ  ಬಿಟ್ಟು ನಿನ್ನ ಹಿಂದೆ ಸುತ್ಕೊಂಡು 
ಹೋಗೆ ಬಿಟ್ಯಲ್ಲೇ ನೀನು ಮುಖ ತಿರ್ಸ್ಕೊಂಡು
ಇಂಥ ಪ್ರಾಬ್ಲಮ್ ಲವ್ವಲ್ಲಿಆರ್ಡಿನರಿ 
ಯಾವದಕ್ಕೂ ಗುರ್ತಿಗೆ ಗಡ್ಡ ಬಿಡ್ಕೊಂಡಿರಿ
ಶೇವಿಂಗ್ ನಾಟ್ ಕಂಪಲ್ಸರಿ

ಕೇಳಿದಷ್ಟೇ ಹಾರ್ಟಲ್ಲಿ ಸಿಂಗಲ್ ಸೀಟ್ 
ಆದ್ರೆ ನಾನಾದೆ ಅವಳಪಾಲಿಗೆ ಹಳೆ 
ಐನೂರು ಸಾವಿರದ ಖಾಲಿ ನೋಟು 
ಹುಡಿಗಿರುಗು ನೋಟಿಗೂ ಎಂಥ ಸಿಮಿಲಾರಿಟಿ 
ಹೊಸದು ಸಿಗೋದಿಲ್ಲ ಹಳೇದು ನಡೆಯಲ್ಲ 
ಪ್ರೀತಿ ಅಂದ್ರೆ ನಿಜವಾಗ್ಲು ಹಿಂದೆ ಸುತ್ತೋದಾ
ಇಲ್ಲ ಸುತ್ತಿದೆಲ್ಲ ಮರ್ತು ಸ್ಟೆಪ್ಪು ಹಾಕೋದ 

ನಿನ್ನ ಕಣ್ಣ ಸೆಲೆ

ಸೆರೆಯಾದೆ ಯಾಕೋ ನಿನ್ನ ಕಣ್ಣ ಸೆಲೆಗೆ 
ಶುರುವಾಯ್ತು ಈಗ ಈ ತುಂಟ ಸಲಿಗೆ 
ಸಾಕಾಯ್ತು ಇನ್ನು ಈ ಮನದ ಸುಲಿಗೆ 
ಸೇರೆಯಾಯ್ತು ಹೃದಯ ನಿನ್ನ ಪ್ರೀತಿ ಸುಳಿಗೆ 

ಮೋಡಿಯೇ ಮಾಡಿದೆ ನಿನ್ನಯ ಪರಿಚಯ 
ದಿನಚರಿ ಇಲ್ಲದೆ ಕಳೆದೆನು ಪ್ರತಿದಿನ 
ಆಸೆಗಳು ನೂರು ಕನಸುಗಳು ನೂರಾರು 
ಒಲವೊಂದೆ ಸಾಕು ನನ್ನ ಪ್ರೀತಿ ಆಸ್ತಿಗೆ 
ನೀನೆ ತಾನೇ ಬೇಕು ಈ ಪ್ರೀತಿ ವ್ಯಾಪ್ತಿಗೆ 

ಸೆರೆಯಾದೆ ಯಾಕೋ ನಿನ್ನ ಕಣ್ಣ ಸೆಲೆಗೆ 
ಸರೆಯಾಯ್ತು ಮನಸ್ಸು ಈ ಸುಂದರ ಅಲೆಗೆ 

ಕನಸಲೂ ಮನಸಲೂ ನಿನ್ನದೇ ಅತಿಶಯ 
ಹಗಲಲು ಇರುಳಲು ಪ್ರೀತಿಲೆ ಪರವಶ 
ಮನಸಲಿ ಕನಸಾಗಿ ಜೊತೆಯಲಿ ನೆರಳಾಗಿ 
ಕಾದಿರುವೆ ನಾ ನಿನಗಾಗಿ ನಿನ್ನ ಜೊತೆಗಾಗಿ 
ತೆರೆಯಾಗಿ ಅಲೆಯಾಗಿ ಪುಟ್ಟ ದಡವಾಗಿ

ಪಿಸುಮಾತು

ಪಿಸು ಮಾತಿನ ತುಸು ಕರೆಗೆ 
ತಡಮಾಡದೆ ನಾ ಬರಲೇ 
ಹೊಸಮಾತಿನ ಸರಿಗಮಕೆ 
ದ್ವನಿಯಾಗಲೇ ನಾ ನಿನಗೆ 
ನಾ ಮನಸ್ಸಿನ ವ್ಯಾಪಾರಿ ನಿನ್ನ ಕನಸು ಬೇಕಿದೆ 
ಈ ಪ್ರೀತಿಯ ಬೀದಿಯಲಿ ನನ್ನ ಹೃದಯ ಬಿಕರಿಯಾಗಿದೆ 

ಪಿಸು ಮಾತಿನ ನಿನ್ನ ಕರೆಗೆ 
ಸಹಿ ಹಾಕಲೆ ಮನಸ್ಸೊಳಗೆ 

ಬೆಳದಿಂಗಳಂತೆ ಬಾಳಲ್ಲಿ ಬಂದೆ 
ಮಿಂಚಾಗಿ ಬಂದು ಬೆಳಕನ್ನು ತಂದೆ 
ನಿನ್ನ ಮುಂಗುರುಳ ನಗೆಗೆ ಬಲಿಯಾದೆ ನಾನು 
ಈ ಪ್ರೀತಿಯ ಖಾಯಿಲೆಗೆ ಉಪಶಮನ ನೀನು 

ಪಿಸು ಮಾತಿನ ತುಸು ಕರೆಗೆ 
ಕರಗೋದೆ ನಿನ್ನ ಕರದೊಳಗೆ 

ನಸುಕಲಿ ಕಂಡ ಸವಿ ಕನಸಂತೆ 
ಇರಬಹುದೇನೊ ನೀ ನನ್ನ ಜೊತೆಗೆ 
ಮುಂಜಾನೆ ತಂದ ತಂಗಾಳಿಯಂತೆ 
ಮುಗುಳ್ನಗೆಯ ತಂದು ಮನಸಲ್ಲಿ ನಿಂತೆ

ಕಾವೇರಿ

ಚಳಿಗಾಲ ಬಂದಾಗ ಎಷ್ಟು ಚಳಿ ಎಂದಳು 
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲ್ ಎಂದಳು 
ಬಿತ್ತೋ ಮಳೆ ಬಿಡದಲ್ಲ ಶನಿ ಎಂಬ ಟೀಕೆ 
ಇವಳು ಮೆಚ್ಚುವ ವಸ್ತು ಇಲ್ಲಿಲ ಜೋಕೆ

ಬೇಕಂತೆ ಇವಳಿಗೆ ಕಾವೇರಿದ ಕಾವೇರಿ 
ಇಲ್ಲಿ ಕುಡಿಯೋಕು ಇಲ್ಲದೆ ನಾವೇನ್ರಿ 
ಅತ್ತ ಮಹದಾಯಿ ಇತ್ತ ಕಾವೇರಿ 
ಪ್ರತಿದಿನ ಸಂಘರ್ಷದ ಗೋಳು 
ಕೇಳೋರು ಇಲ್ಲದ ಕರುನಾಡ ಅಳಲು 

ಹೋಗ್ತಾಳೆ ಕೋರ್ಟ್ಗೆ ಪದೇ ಪದೇ 
ಅಲ್ಲಿ ಕರ್ನಾಟಕ ಸೋಲೋದು ಇದ್ದದೆ 
ನ್ಯಾಯಾಲಯ ಮಾಡಿತು ಆದೇಶ
ಇಲ್ಲಿ ನೀರನ್ನು ಬಿಟ್ಟ ನಿದ್ದೇಶ

#ನಮ್ಮ ಕಾವೇರಿ

ಜಾರೋ ಸಂಜೆ

ಜಾರೊ ಸಂಜೆ ರಂಗಲ್ಲಿ 
ನಿನ್ನ ನೋಡೊ ಗುಂಗಿದೆ 
ಇರುಳು ಕಂಡ ಕನಸಲಿ 
ನೀನೇ ಬಂದ ಹಾಗಿದೆ 

ಏನೋ ಮೋಡಿ ಪುನಃ ನಿನ್ನ ನೋಡಿ 
ಮತ್ತೆ ಮರಳಿ ಕಂಡು ಕೇಳಿ 
ನನಗರಿಯದೆ ನನ್ನಲ್ಲೆ
ತುಂಬಾ ರೂಡಿ ಈಗ ನಿನ್ನ ಜೋಡಿ 
ಕೊನೆತನಕ ಇರುವೆ ಕೂಡಿ
ನಿನಗಾಗಿಯೇ ನಾನೆಂದು.

ನಿನ್ನ ಪ್ರೀತಿ ಹಲವು ರೀತಿ 
ಹೊಸತು ನನಗೆ ಇಂಥಾ ವೃತ್ತಿ 
ಕಳೆದುಕೊಂಡೆ ಅನ್ನೊ ಏನೋ ಭೀತಿ 
ನನ್ನೊಳಗೆ ನಾನಿಂದು .

ಬದಲಾದ ನಾನು

ಬದಲಾದೆ ನಾನೀಗ ಭರಪುರವಾಗಿ
ನಿನಗಾಗಿ ಇನ್ನು ಬಲವಂತನಾಗಿ 
ಪ್ರೀತಿ ತೋರಿದೆ ಒಂಚೂರು ಘಾಸಿ ಮಾಡದೆ 
ಮೌನವೇ ಹೇಳಿದೆ ಪ್ರತಿ ಉಸಿರಲು 
ನಿನ್ನ ಹೆಸರು ಗೆಳತಿ ನೀನೆ ಉಸಿರು 

ಬದಲಾವಣೆ ಈಗ ಬಲು ರೋಚಕ 
ಬದಲಾದ ನಿನ್ನ ಜೋಡಿ ತುಸು ಮೋಹಕ 
ಆಗಮನ ನಿನ್ನ ಆಕರ್ಷಣೆ 
ಶುರುವಾಯಿತು ಪ್ರೀತಿ ಅನ್ವೇಷಣೆ 

ಬದಲಾದೆ ನಾನೀಗ ಬಲವಂತನಾಗಿ 
ನಿನಗಾಗಿ ಎಂದು ಅನುರಾಗಿಯಾಗಿ 

ಭರವಸೆಯ ತಂಗಾಳಿ ಬೀಸಿದೆ ನನ್ನಲಿ 
ಬೆಳೆವಣಿಗೆಯ ಹೊಸಬೆಳಕು ಮೂಡಿದೆ ನನ್ನಲಿ 
ಬಲು ಭಾವುಕ ರೋಮಾಂಚಕ ಬದಲಾವಣೆ 
ನನ್ನಲಿ ನಾ ಕಂಡೆ, ಇನ್ನೆಲ  ನೀನೇನೆ.

ಕನ್ನಡಿ

ಕನ್ನಡಿಯಲ್ಲಿ ಹುಡುಕಲೇ ನಿನ್ನ ನಗುವಂದನು 
ಮುನ್ನುಡಿಯಲಿ ಬರೆಯಲೇ ನಿನ್ನ ಹೆಸರೊಂದನು 
ನಾ ಬರೆವ ಪುಸ್ತಕ ಅದೇ ನಿನ್ನ ಹೆಸರು 
ನಿನ್ನೆಸರಲ್ಲೇ ಕುಳಿತಿದೆ ನನ್ನ ಉಸಿರು I I 

ಮನಸಲ್ಲೀಗ ಶುರುವಾಗಿದೆ ಗೀಚುವ ಖಯಾಲಿ 
ಪ್ರೀತಿಯ ಕುಸುರಿಯಂತು ನನಗೀಗ ಮಾಮೂಲಿ 
ಎಷ್ಟೇ ಬರೆದರೂ ಸಿಗುತ್ತಿಲ್ಲ ಯಾವುದು ಸ್ವಾರಸ್ಯ 
ಮರೆಯಾಗುತ್ತಿದೆ ಈಗ ಪದಗಳ ಸಾಮರಸ್ಯ 

ಕನ್ನಡಿಯಲ್ಲಿ ಹುಡುಕಲೇ ನಿತ್ಯ ಒಲವೊಂದನು 
ಮುನ್ನುಡಿಯಲಿ ಬಿಡಿಸಲೇ ನನ್ನ ಕನಸೊಂದನು I I   


ಇರುವಾಸೆ ಒಂದೇ ನಾ ಹೇಳ ಬಂದೆ 
ತಂಗಾಳಿ ತಂದ ಮುಂಗಾರು ನೀನು 
ಮೆಳೆಗಾಲ ತಂದೆ ನೀ ನನ್ನ ಮನಕೆ 
ಮಗುವಾಗಿ ಓರಗೆ ನೀ ನನ್ನ ಎದೆಗೆ

ಚಿಗುರಿದ ವಯಸ್ಸು

ಸರಿಯಾಗಿ ತಿಳಿಯದ ವಯಸ್ಸಿಗೆ
ಕಣ್ಣಲೇ ಉಳಿಯಿತು ಸಲುಗೆ
ಮನಸ್ಸಲ್ಲೆ ಮಾಡಿದ ಕೃಷಿಗೆ
ಆರೈಕೆ ಮಾಡುವೆಯ ನೀ ಜೊತೆಗೆ
ಕನಸಲಿ ಕೊರೆಯುವ ಕಸುಬುನು ನೆನೆಯುತ
ಶರಣಾಗುವುದು ಇನ್ನು ಖಚಿತ

ನೀನೆ ನನ್ನಯ ಎಲ್ಲ ಜಾತಕ
ಪ್ರೀತಿ ಹಂಚಿದೆ ಯೆಲ್ಲೂ ವ್ಯಾಪಕ
ಬಲವಾಗಿದೆ ಗುರುವಿನ ಬಿಗುಮಾನ
ಕೊನೆಗೊಳ್ಳುವುದೇ ಮನಸ್ಸಿನ ಈ ಮೌನ
ನಿನ್ನಯ ನೆನಪಲೆ ನಾಳೆಯ ಕಳೆಯುತಾ
ಕಳೆದೋಗುವುಂತು ತುಂಬಾ ಖಚಿತ

ನಿನ್ನ ರೂಪಕ್ಕೆ ಕಾದು ಕುಂತಿವೆ
ಚಿತ್ರಸಂತೆಯ ಬಣ್ಣದಂಗಡಿ
ನಿನ್ನ ಕೂಡಿದ ನನ್ನ ಜೀವನ
ಸಪ್ತ ವರ್ಣದ ಬಣ್ಣದೋಕುಳಿ
ನೆಲೆನಿಂತಾಗ ಈ ಪ್ರೀತಿ ತುಸು ಅಪರೂಪ
ಸಿಗದೆ ಇದ್ರೆ ತುಂಬಾನೇ ಆರೋಪ
ಒಲವಿನ ಸುಳಿಯಲಿ ಇರುಳನು ಸಲುಹುತಾ
ನಶೆಯೇರುವುದು ತುಂಬಾ ಖಚಿತ

ಬೆಂಗಳೂರು

​ಬ್ಯಾಂಗ್ ಬ್ಯಾಂಗ್ ಬೆಂಗಳೂರು 
ಎಲ್ರ ಬೇಳೆಕಾಳು ಬೇಯೋದಿಲ್ಲೆ ಗುರು 
ಯಂಗ್ ಜೆನೆರೇಷನ್ಗೆ  ತವರೂರು 
ನಮ್ಮ ಬೆಂಗಳೂರು 
ಸಾಫ್ಟ್ವೇರ್ ಟೆಕ್ನಾಲಜಿಗೆ ಚೂರು ಬೆಲೆ ಜೋರು 
ಇದು ನಮ್ಮ ಬೆಂಗಳೂರು 

BMTC ಫುಲ್ ರಶೋ 
ಮೆಟ್ರೋ ರೈಲ್ ಫುಲ್ ಕುಶೋ 
ಓಲಾ ಕ್ಯಾಬ್ ಮೀಟರ್ ರಿಕ್ಷಾ
ಮಾರ್ನಿಂಗ್ ರೈಡ್ ಬುಲೆಟ್ ಬೈಕು 
ಫೋಟೋಗ್ರಫಿ ಪ್ರೊಫೈಲ್ ಪಿಕ್ಸ್
ವೀಕೆಂಡ್ ಸಿನಿಮಾ ಮಲ್ಠಿಫ್ಲೇಕ್ಸು
ಎಣ್ಣೆ ಬಾಟ್ಲು ಪೊಲೀಸ್ ಕಾಪ್ಸ್ 
ಟೋಟಲಿ ಟ್ರಾಫಿಕ್ ಲೈಫ್  ಫುಲ್ 
ಬ್ಯಾಂಗ್ ಬ್ಯಾಂಗ್ ಬೆಂಗಳೂರು 

ಕೋಟಿ ಜನ ಇದಾರೆ ಗುರು 
ಟ್ರಾವೆಲ್ ಟೈಮ್ ಏಳೆಂಟು ಅವರ್
ಡೈಲಿ ಜರ್ನಿ ಹಾರ್ರಿಬಲ್ 
ರೋಡ್ ಲ್ಲಿ ಇರೋದು ಒನ್ದಸ್ವಲ್ಪ ಜಾಗ 
ಅಡ್ಜಸ್ಟ್ ಮಾಡ್ಕೊಳ್ರಪ್ಪ ಆದಷ್ಟು ಬೇಗ 

ಆಮಂತ್ರಣ

ಗಮನ ನಿನ್ನ ಕಡೆ
ಸೆಳೆವ ಸಣ್ಣ ನಡೆ
ನೀಡದೆಯೇ ಆಮಂತ್ರಣ 
ಮೂಡಿದೆಯೇ ಕಿರು ಚಿತ್ರಣ 
ಮನದಲ್ಲೀಗ ಮೊದ  ಮೊದಲ ಮುದ್ರಣ 
ಸವಿ ನೆನಪುಗಳ ಹೂರಣ 
ನವ ಕನಸುಗಳ ಚಾರಣ

ನಿನ್ನ ನಡೆಯ ಪಥದ ಜಾಡು 
ಹಿಡಿದು ಬಂದೆ ತೊರೆದು ನಾಡು 
ಕಾನನವೆ ಮಂದಿರ ಕನಸುಗಳ ಹಂದರ 
ಇರುಳಿನ ಚಂದಿರ ನೀಡುವನು ಸುಂದರ 
ಪ್ರತಿ ರಾತ್ರಿಯು ಹೊಸ ರೀತಿಯ 
ಬೆಳದಿಂಗಳ ರಸದೌತಣ

ಗಮನ ನಿನ್ನ ಕಡೆ 
ಸೆಳೆವ ಕಣ್ಣ ಸೆಲೆ

ಜರೋ ಸಮಯ ತೆರೆಗೆ ಸರಿಸಿ
ಬಂದೆ ನಲ್ಲೆ ನಿನ್ನ ಸನಿಹ ಅರಸಿ  
ಸುರಿಸಲೆ ಒಲವಿನ ಸಾವಿರ ಮುತ್ತನು
ಹರಿಸಲೆ ಪ್ರಾಯದ ಪ್ರೀತಿಯ ಹೊಳೆಯನು  
ಮಾಗಿದ ಮನಸ್ಸಿದು ವರಿಸು ನೀನು 
ಹರೆಯದ ವಯಸ್ಸಿದು ಸಹಿಸು ನೀನು

ಜನ್ಮ

ಸುತ್ತುತಿರುವ ಭೂಮಿಯಲ್ಲಿ
ಸತ್ತು ಹೋಗುವರು ನಾವೆಲ್ಲ
ಇಂದೋ ನಾಳೆ ಒಂದು ದಿವಸ
ಮುಗಿಸಿ ಹೆಗಲ ಮೇಲೆ ಹೊತ್ತ ಕೆಲಸ

ಹೊತ್ತು ತಂದಿಲ್ಲ ಕುಡಿಕೆ ಹೊನ್ನು
ಸತ್ತು ಸೇರುವುದು ಪುಣ್ಯ ಮಣ್ಣು
ಬಂದು ಹೋಗುವ ನಡುವೆ ಜೀವನ
ಈಜಿ ಜಯಿಸಬೇಕು ಪ್ರತಿದಿನ

ದಾರಿ ತಪ್ಪಿದ ದಾಸಿ

ಸ್ವಭಾವತಃ ಬಲುಪಾಪ. ಹಣೆಯೊಲ್ಲೊಂದು ಬಿಳಿನಾಮ.ಆದ್ರಿಂದ ಅವ್ಳಿಗೆ ದಾಸಿ ಎಂಬಾ ನಾಮಕರಣವಾಯಿತು. ಉಳಿದ ಕಡೆಯಲ್ಲ ಬರೆ ಶ್ಯಾಮಲ. ನೋಡಲೂ ದಷ್ಟಪುಷ್ಟವಾಗಿದ್ದು ಊರಿನಲ್ಲಿ ಯಾ...