The Stranger Kisses
ಮಿಣಿ ಮಿಣಿ ಹೊಳೆಯುವ ಸಮುದ್ರ, ದೂರದೊಲ್ಲೊಂದು
ಹಾಯುತ್ತಿರುವ ಹಡಗು. ದೋಣಿಗಳಲ್ಲಿ ಮೀನಿಗೆ ಬಲೆ
ಬೀಸುತ್ತಿರುವ ಮೊಗವೀರರು. ಆಕಾಶದಲ್ಲಿ ಪ್ಯಾರಚೂಟ್ನಲ್ಲಿ
ಹಾರುತ್ತಿರುವ ಪ್ರಣಯ ಪಕ್ಷಿಗಳು. ಕೆಳಗೆ ದಡದಲ್ಲಿ ಕುರುಕಲು ತಿಂಡಿ, ನಿಂಬೂ ಸೋಡಾ ಮಾರುತ್ತಿರುವ ಪೆಟ್ಟಿಗೆ ಅಂಗಡಿಗಳು. ಸೂರ್ಯಸ್ನಾನ ಮಾಡಲು ಕಿನಾರೆಯಲ್ಲಿ
ಹುಟ್ಟುಡುಗೆಯಲ್ಲಿ ಅಲೆಯುತ್ತಿರೋ ನೂರಾರು ಪರ-ದೇಶಿಗಳು. ಅವರನ್ನು ನೊಡಲೆಂದೆ ಬರುವ ದೇಶಿ ಹುಡುಗರು. ನಗರದ ಜಂಜಾಟಗಳಿಗೆ ಬೇಸತ್ತು ಜೀವನದಲ್ಲಿ ಎಲ್ಲಾ
ಮುಗಿಯಿತೆಂಬತೆ ಬಿಯರ್, ಸಿಗರೇಟ್ ಹಿಡಿದು ಕೂಳಿತಿರೋ
ಇಂದಿನ ಯಂಗ್ ಜೆನೆರೆಷನ್.
ವಾರಾಂತ್ಯ ಸುಮ್ಮನೆ ಮನೆಯಲ್ಲಿ ಹಾಯಾಗಿ ಕಳೆಯುವ
ಸಮಯ. ಗುರುವಾರ ಸಂಜೆ ಆದಿಯ ವಾಟ್ಸಪ್ ರಿಂಗಣಿಸಿತು.
ಆದ್ಯಾ ವೀಕೆಂಡ್ ಪ್ಲಾನ್ಸ ಕೇಳಿದಳು. ಏನಿಲ್ಲವೆಂದ ಆದಿ.
ನಂಗೂ ಒಂದು ಬ್ರೇಕ್ ಬೇಕು ಎಲ್ಲಾದ್ರು ಹೋಗಿ ಬರೊಣ್ವಾ ಕೇಳಿದ್ಲು. ಪ್ಲೇಸ್ ತಿರ್ಮಾನ ಮಾಡೋದರ
ಚರ್ಚೆಗಳು ಶುರುವಾಗಿ ಕೊನೆಗೆ ಕೇರಳಕ್ಕೆ ತಲುಪಿತು. ಬಸ್,
ರೂಮ್, ಬ್ಯಾಗ್ ಪ್ಯಾಕ್ ರೆಡಿಯಾಯಿತು. ಶುಕ್ರವಾರ ಸಂಜೆ
ಇಬ್ಬರ ಸವಾರಿ ಹೊರಟಿತು.
ಆದ್ಯಾ ಮತ್ತುಆದಿಗೆ ಇತ್ತೀಚಿಗೆ ಪರಿಚಯವಾಗಿದ್ದಾದರು ಒಬ್ಬರನೊಬ್ಬರು ಚೆನ್ನಾಗಿ ಅರಿತಿದ್ದರು. ಹಾಗೆ ಒಪ್ಪಿ ಹೋಟೆಲ್ ರೂಂ ಶೇರ್ ಮಾಡಿದ್ರು. ಬೆಳಿಗ್ಗೆ ಆದ್ಯಾಳನ್ನು ಎಬ್ಬಿಸಿ
ಹೊರಡೊದರೊಳಗೆ ಆದಿ ಎದ್ದು ರೆಡಿಯಾಗಿ ಇನ್ನೊಂದು ನಿದ್ದೆ ಮಾಡಿದ್ದ. ಆದಿಗೆ ಹೊರಡಲು ಹತ್ತು ನಿಮಿಷವಾದರೆ, ಆದ್ಯಾಳಿಗೆ ಗಂಟೆಯ ಮೇಲೆಹತ್ತು ನಿಮಿಷದಲ್ಲಿ ಮುರ್ನಾಲ್ಕು ಡ್ರೆಸ್ಗಳನ್ನು ಬದಲಾಯಿಸಿ
ರೆಡಿಯಾಗಿದ್ಲು. ಆದಿಗೆ ಒಪ್ಪವಾಗಿ ರೆಡಿಯಾದ ಆದ್ಯಾಳನ್ನು ನೋಡಿದಾಗ ಅವಳು ತೆಗೆದುಕೊಂಡ ಸಮಯ
ಸಾರ್ಥಕವೆಂದೆನಿಸಿತು. ಆದ್ಯಾ ವಿರಳ ಕಾಯದ ಕೃಷ್ಣವರ್ಣಿ. ಬಟ್ಟಲು ಕಣ್ಗಳು, ಶಿವನ ಜಟಾ ಮಾದರಿಯ
ಕೂದಲು. ಮುಖಕ್ಕೆ ಒಪ್ಪುವಷ್ಟು ಮೇಕಪ್ಪು.ಎಲ್ಲಿಯೂ ಹೆಚ್ಚಿನಿಸದ ದೇಹದ ಆಂಗಿಕ ಸೌಂದರ್ಯ. ಕನಿಷ್ಟ ಮತ್ತು ಗರಿಷ್ಠ
ಬಟ್ಟೆಗಳಲ್ಲಿಯೂ ಸುಂದರವಾಗಿ ಕಾಣುವ ಅಪೇಕ್ಷಿತೆ. ಒಟ್ಟಾರೆ ಆದ್ಯಾಳ ಅಂದ ಆದಿಯ ಕಣ್ಣುಗಳಿಗೆ ಹಬ್ಬದೂಟ
ಉಣಬಡಿಸುತ್ತಿದ್ದವು.
ಇಬ್ಬರೂ ರೂಮಿಂದ ಹೊರಬಿದ್ದು ದಿನವೆಲ್ಲ ಸುತ್ತ ಮುತ್ತ ಸುತ್ತಿ ಒಂದಷ್ಟು ಪೋಟೋ ಕ್ಲಿಕ್ಕಿಸಿ ಸಂಜೆ ಬಿಯರ್ ಹೀರಿ, ಸೀಪು಼ಡ್ಡಿನ ಬಫೆ಼ಟ್ ತಿಂದು ರೂಮಿಗೆ ಲ್ಯಾಂಡ್ ಆದರು. ಭಾನುವಾರ
ಬೆಂಗಳೂರಿಗೆ ಹಿಂತಿರುಗಬೇಕೆಂದು ಪ್ಲಾನ್ ಆಗಿತ್ತು. ಆದರೆ
ಆದ್ಯಾಳಿಗೆ ಅಲ್ಲಿಯ ವಾತಾವರಣ ತುಂಬಾ ಹಿಡಿಸಿತ್ತು. ಇವರು ತಂಗಿದ್ದ ಸ್ವಲ್ಪ ದೂರದಲ್ಲಿ ಇನ್ನೋಂದು ಬೀಚ್ ಇದೆ ಹೋಗಣ
ಎನ್ನುವುದು ಅವಳ ಹಠ. ಬೆಂಗಳೂರಿಗೆ ವಾಪಸ್
ಹೊರಡೋಣ ಎಂದು ಆದಿಯ ವಾದ. ಇಬ್ಬರ ಮಾತಿನ
ಚಕಮಕಿಯ ನಂತರ ಆದ್ಯಾ ಆದಿಗೆ ಓಪ್ಪಿಸಿದಳು. ಕೇರಳ
ಸರ್ಕಾರದ ಲಟಾರಿ ಬಸ್ಸಿನಲ್ಲಿ ಸವಾರಿ ಇನ್ನೊಂದು ಜಾಗಕ್ಕೆ
ಹೊರಟಿತ್ತು. ಬಸ್ ಲಟಾರಿಯಾಗಿದ್ದರು ವೇಗ ಮಾತ್ರ
ವಿಮಾನದ್ದು. ತಲುಪುವ ವೇಳೆಗೆ ಬಸ್ಸು ಬಾಡಿಯ ಎಲ್ಲಾ
ಅಂಗಗಳ ಪರಿಚಯ ಮಾಡಿಕೊಟ್ಟಿತ್ತು.
ಬಸ್ ಇಳಿದು ರಾತ್ರೆ 10 ರ ಹೊತ್ತಿಗೆ ಆಟೋ ಏರಿ ಇಬ್ಬರೂ
ತಂಗುವ ನಿಲ್ದಾಣದ ಕಡೆಗೆ ಹೊರಟರು.. ಹೋಟೆಲ್ ಚೆಕ್ ಇನ್‌ಮಾಡಿ, ಬಸ್ಸಿನ ಏರಿಳಿತಕ್ಕೆ ಜಜ್ಜಿದ ದೇಹದ ಭಾಗಗಳಿಗೆ
ವಿಶ್ರಾಂತಿ ನೀಡಿ, ಚೆನ್ನಾಗಿ ನಿದ್ರಿಸಿ ಎದ್ದು ಮುಂಜಾನೆ ಕಡಲ
ತಡಿಯ ಕಡೆ ಹೊರಟರು. ಆದಿ ವಿಶಾಲ ಸಮುದ್ರ, ದಡದ
ಉದ್ದಕ್ಕೂ ಅಂಗಡಿಗಳ ಸಾಲು, ಇದು ನನ್ನ ಜಾಗವೆಂದು ಆಗಾಗಕಾಲಿಗೆ ತಾಗಿ ತಿಳಿಸುವ ಅಲೆಗಳು, ಬಲೆಗಳನ್ನು ಹಣಿಯುತ್ತಿರುವಮೀನುಗಾರರು. ಜಾಗಿಂಗ್, ವಾಕಿಂಗ್,
ಯೋಗದ ನಾನ ಭಂಗಿಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಜನರು,ಮರಳಿನ ಮೇಲೆ ಬಿಟ್ಟು ಹೋದ ಹೆಜ್ಜೆಗಳ ಗುರುತು,
ಅಲೆಗಳ ಜೊತೆ ತೇಲಿ ಬಂದು ಒಡೋಡಿ ಹಿಂತಿರುಗುತ್ತಿರುವ
ವಿವಿಧ ಜಲಚರಗಳು, ಅಲೆಗಳೊಂದಿಗೆ ಬಾಜಿಗಿಳಿದ ಸರ್ಪ಼ರ್ಗಳು,ಇರುಳೆಲೆಲ್ಲ ಸಮುದ್ರದಲ್ಲಿ ಮಿಂದು ಮೈ ಬೆಚ್ಚಾಗಾಗಿಸಲು
ಆಕಾಶವೇರುತ್ತಿರುವ ಸೂರ್ಯ. ಇವೆಲ್ಲ ಗಮನಿಸಿ ಇಲ್ಲಿಗೆ
ಬಾರದಿದ್ದರೆ ಖಂಡಿತವಾಗಿ ಮಿಸ್ ಮಾಡಿಕೊಳ್ಳುತಿದ್ದೆವು
ಒಳ್ಳೆದಾಯಿತೆಂದು ಯೋಚಿಸಿ ಬನಿಯನ್ ಮತ್ತು ಶಾರ್ಟ್ಸ ಕಳಚಿನೀರಿಗಿಳಿದ.ಆದ್ಯಾ ದಡದ ಮೇಲೆ ಹಾರುವ ಮುಂಗುರಳನ್ನು ಮತ್ತೆ ಮತ್ತೆ ಬದಿಗೊತ್ತಿ, ಕಣ್ಗಳ ಮೇಲೆ ಕನ್ನಡಕವನ್ನು ಇರಿಸಿ , ಹಾಕಿದ್ದ ಗೌನ್‌ಥರದ ಅರಿವೆಯನ್ನು ಸಡಿಲಗೊಳಿಸಿ ಗಾಳಿಗೆ
ಹಾರಲು ಬಿಟ್ಟು, ಸ್ಲಿಪ್ಪರನ್ನು ಕೈಯಲ್ಲಿ ಹಿಡಿದು ವಾಪಸ್ಸು ಹೋಗುವ ದಿನವನ್ನು ಇನ್ನೇರಡು ದಿನ ಮುಂದೆ ತಳ್ಳುವ ಆಲೋಚನೆಯಲ್ಲಿ ಅಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ
ಓಡಾಡುತಿದ್ದಳು. ಆಫೀ಼ಸ್ನ ಮ್ಯಾನೆಜರ್ಗೆ ಪೂಸಿ ಹೊಡೆದು ರಜೆಯನ್ನು ಮುಂದುವರೆಸಿಕೊಂಡಳು.
ನೈಟ್ ಲೈಫ್ ಕಳೆಯಲು ಹೇಳಿಮಾಡಿಸಿದ ಜಾಗ. ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಹೊಟ್ಟೆಗಿಷ್ಟು ಹಿಟ್ಟನ್ನು ಹಾಕಿ ಒಂದು
ಸುತ್ತು ಶಾಪಿಂಗ್ ತೆರಳಿದರು. ಆದ್ಯಾ ಖುಷಿಯಿಂದ ಎಲ್ಲಾ
ಅಂಗಡಿಗಳನ್ನು ಒಳಹೊಕ್ಕು ಹೊರಬರುತ್ತಿದ್ದಳು. ಆದಿ ಅಲ್ಲೇ ಸುತ್ತ ಮುತ್ತ ಫೋಟೋಗಳನ್ನು ತೆಗೆಯುತ್ತಾ ಕಾಲಹರಣ
ಮಾಡುತ್ತ, ಆದ್ಯಾ ಕೊಂಡ ಕೆಲವು ವಸ್ತುಗಳಿಗೆ ಪೇ ಕೂಡ
ಮಾಡುತಿದ್ದ. ಮುಂದುವರೆದು ಒಂದು ಬಾಡಿ ಮಸಾಜ್ ಶಾಪ್ನ ಎದುರು ನಿಂತು ಹಿಂದಿನ ದಿನ ಬಸ್ ಪ್ರಯಾಣದಲ್ಲಿ
ಜಖಂಗೊಂಡ ಮೈಯನ್ನು ಸ್ವಲ್ಪ ಹುರಿಗೊಳಿಸಲು ಮಸಾಜ್ ಪ್ಯಾಕೇಜ್ಗಳನ್ನು ಪರಿಶೀಲಿಸತೊಡಗಿದರು. ಒಂದನ್ನು ಆಯ್ಕೆ
ಮಾಡಿ,ಒಂಟಿಯಾಗಿ ಉರಿಯುತ್ತಿದ್ದ ದೀಪದ ರೂಮಿಗೆ ಎಣ್ಣೆಯ ಜಿಗುಟು ವಾಸನೆ ಸುಸ್ವಾಗತಿಸಿತು. ಒಳಹೊಕ್ಕು ಗುಪ್ತ
ಕ್ಯಾಮರಾಗಳಿಗೆ ಸಾಧ್ಯತೆಯ ಬಗ್ಗೆ ಚಿತ್ತವಿಟ್ಟು, ನಿರ್ವಸ್ತ್ರಗೊಂಡು,ಮೈತುಂಬಾ ಎಣ್ಣೆ ತಿಕ್ಕಿಸಿಕೊಂಡು ಕಂಬಳದಲ್ಲಿ ಓಡುವ
ಕೋಣಗಳಂತೆ ಕಾಣುತ್ತಿದ್ದರು. ಎಷ್ಟು ಉಜ್ಜಿದರೂ ಹೋಗದ
ಜಿಡ್ಡನ್ನು ತಿಕ್ಕಿ ತೊಳೆದು, ಸ್ನಾನ ಮಾಡಿ ಮತ್ತೆ ಸಮುದ್ರದಂಚಿಗೆ ಹೋಗಿ ಕುಳಿತರು. ಸೂರ್ಯ ತನ್ನ ಹಗಲಿನ
ವೃತ್ತಿ ಮುಗಿಸಿದಣಿದು ವಿಶ್ರಾಂತಿ ತೆಗೆದುಕೊಳ್ಳಲು ಸಮುದ್ರಕ್ಕೆ
ಇಳಿಯುತ್ತಿದ್ದ.ಆದ್ಯಾ ಸೀಗೆರೆಟ್ ಸೇದುತ್ತಾ ಹೊಗೆಯನ್ನು ರಿಂಗುರಿಂಗಾಗಿ ಬಿಡುತ್ತಾ ಪಕ್ಕದಲ್ಲಿ ಕೂತಿದ್ದಳು. ಬೆಳಿಗ್ಗೆ ತಿಂದಮೇಲೆ ಹೊಟ್ಟೆಗೆನು. ಇಳಿದಿರಲಿಲ್ಲ. ಹೊಟ್ಟೆ ಚುರುಗುಟ್ಟಲು ಶುರುವಿಟ್ಟಿತ್ತು.ಕಡಲ ಮರಳರಾಶಿಯಿಂದ ಎದ್ದು ಬಟ್ಟೆಗಳನ್ನು ಕೊಡಕಿ ಹೋಟೆಲ್ಗೆ ತೆರಳಿ Meat Balls ಸ್ಪೆಗೆಟ್ಟಿಯನ್ನು ಅರ್ಡರ್ ಮಾಡಿದಳು ಆದ್ಯಾ.
ಸುಮ್ಮನಿರಲಾರದ ಆದಿ ಆದ್ಯಾಳ ಬಳಿ ಯಾವ Meat Balls ಎಂದು ಕೇಳಿದ. ಕೇರಳದ ಜಾಗ, ಹೆಚ್ಚು ವಿದೇಶಿಯರು ಸುತ್ತಾಡುವ ಜಾಗ, ವೇಟರ್ ಆದ್ಯಾಳಿಗೆ Beef Meat Balls ಎಂದ. ಆದಿಗೆ ಅರಿವಿಲ್ಲದೆ ಮೊದಲ ಬಾರಿಗೆ Beef
ತಿಂದು ಅವನ ಮುಖ ಪೇಲವಾಯಿತು. ಆದ್ಯಾಳಿಗೂ ಆದಿಯ
ಮುಖ ನೊಡಿ ಪಾಪವೆನಿಸಿತು. ನನಗೂ ಗೊತ್ತಿರಲಿಲ್ಲ ಕಣೋ, Sorry ಕೇಳಿದಳು. ಬೇಜಾರಾಗಿದ್ದಳು. ಆದಿಗೆ ಗೋವು ಹುಟ್ಟಿದ ತರುವಾಯ ಜೊತೆಗೆ ಬೆಳೆದ ಜೀವಿ, ಭಾವನಾತ್ಮಕ ಪ್ರಾಣಿ.
ರೂಮಿಗೆ ಹೋಗಿ ತಿಂದ ಆಹಾರವನ್ನು ಪೂರ್ತೀ ವಾಂತಿ
ಮಾಡಿದ್ದ.
ಆದಿ ದ್ವಂದ್ವ ಮನಸ್ಥಿತಿಯಲ್ಲಿ ಟ್ರಿಪ್ಗೆ ತೆರಳಿದ್ದ. ಕಾರಣ ಊರಿನಲ್ಲಿತಾಯಿಗೆ ಸ್ವಲ್ಪ ಆರೋಗ್ಯವಿರಲಿಲ್ಲ. ಅಪ್ಪನಿಂದ ಆದಿಗೆ ಫೋನ್ ಬಂತು. ಆದಿಯ ಅಕ್ಕ ಇನ್ನೂ
ಅಮ್ಮನನ್ನು ನೋಡಲು ಬಂದಿಲ್ಲ,ನಾನು ಕೇಳಿದರೆ, ಅವಳು ಊರಿಗೆ ಬಂದರೆ ಅಲ್ಲಿಯ ಶೀತ ವಾತವರಣಕ್ಕೆ ಮಗುವಿಗೆ
ಹುಷಾರಿಲ್ಲವಾಗುತ್ತದೆ ಎನ್ನುವ ಕಾರಣ ನೀಡಿದಳು ಎನ್ನುತ್ತಾ
ಅಪ್ಪ ಕಣ್ಣೀರಿಡುತ್ತಾ ಹೇಳಿದರು. ಅಪ್ಪನಿಗೆ ಸಮಾಧಾನ
ಪಡಿಸುವ ವೇಳೆಗೆ ಆದಿಯ ಕಣ್ಣುಗಳಲ್ಲಿಯೂ ನೀರಿಳಿಯಲು ಶುರುವಾಗಿತ್ತು.ಆದ್ಯಾಳಿನ್ನು ಸಮಾಧಾನ, ಸಂತೈಸಲು ತಿಳಿಯದ ಹುಡುಗಿ. ಅವಳಿಗನಿಸಿದ ಉಪಾಯಗಳನ್ನು ಹೇಳಿ ಪ್ರಯತ್ನಿಸಿದಳು.
ಆದಿಯ ಅಳು ನಿಲ್ಲಲಿಲ್ಲ. ಊರಿಗೆ ಹೋಗಲು ಇವನ ಕೆಲ್ಸ.
ಅಕ್ಕ ಹೋಗಿಲ್ಲವೆಂದು ಅವಳ ಮೇಲಿನ ಕೋಪ. ಏನು
ಮಾಡಬೇಕೆಂದು ತಿಳಿಯದೆ ಬಾರೊಂದಕ್ಕೆ ಹೊಕ್ಕು ಬಿಯರ್ ಕೊಂಡ, ಇವನ ದುಃಖಕ್ಕೆ ನಕ್ಷತ್ರಗಳೆಲ್ಲ ನಗುತ್ತಿರುವಂತೆ ಕಂಡು
ಕೆಳಗೆ ಕೂತು ಜೋರಾಗಿ ಅಳುತ್ತಾ ಬಿಯರ್ ಹೀರಿದ. ಆದ್ಯಾ
ಪಕ್ಕದಲ್ಲಿ ಬಂದು ಸೀಗೆರೆಟ್ಹಚ್ಚಿ ಕುಳಿತಿದ್ದಳು. ಆದಿ ಮೊದಲ
ಬಾರಿ ಅಂದು ಅವಳ ಬಳಿ ಸೀಗೆರೆಟ್ ಕೇಳಿ ಸೇದಿದ್ದ. ಸಾಕಷ್ಟು ಹರಟಿದ್ದರು.. ಅಷ್ಟರೊಳಗೆ ಆದ್ಯಾಳ ಅಲೋಚನೆ ಮುಂದಿನ ತಿಂಗಳಲ್ಲಿ ಪ್ಲಾನ್ ಮಾಡಿದ್ದ ಟ್ರಿಪ್ ಬಗ್ಗೆ ಹೊರಳಿತ್ತು, ಅದರ
ಸಾಧಕತೆ ಈಗ ಡೋಲಾಯಮಾನ. ಆದ್ಯಾ,ಆದಿಯೆಂದು
ಕಳಕಳಿಯಿಂದ ಕರೆದು ಪ್ಲೀಸ್ ಆ ಟ್ರಿಪ್ಪನ್ನು ಮಾತ್ರ ಕ್ಯಾನ್ಸಲ್ ಮಾಡ್ಬೇಡ ಕಣೋ, I am very Excited !!! ಗೊತ್ತಾ..ಏನಾದ್ರು ಮಾಡಿ ಬಾರೋ ಅಂತ
ಪ್ರಾಮಿಸ್ ತೆಗೆದುಕೊಂಡಳು. ಅಲ್ಲಿಗೆ ಆದಿಗೆ ಆದ್ಯಾ ಇನ್ನಷ್ಟು
ಹತ್ತಿರವಾಗಿದ್ದಳು.
ಇಬ್ಬರೂ ಮಾತಾಡುತ್ತಾ ಅಲೆಗಳ ಸಂಗೀತಕ್ಕೆ ಕಿವಿಕೊಟ್ಟು ಕೂತಿದ್ದರು. ಆದ್ಯಾ ಇನ್ಸ್ಟಾ, ವಾಟ್ಸಾಪ್ ಚಾಟ್ ಮಾಡುತ್ತಿದ್ದರೆ, ಆದಿ ಮೊಬೈಲ್ನಲ್ಲಿ ಕವಿತೆ ಬರೆಯುತ್ತಿದ್ದ.
ಅಲೆಗಳು ಹೊರಟಿವೆ ಹೃದಯದ ಕಡಲಲ್ಲಿ
ಹುಡುಕುತಾ ತೀರದೀ ಕುಳಿತಿರೋ ಬಡಿತವ
ಹೇಳಲು ನೆನಪಿನ ವಿದಾಯವ ಬರುತಿವೆ ಸಾಲಲ್ಲಿ
ಹೋಗಲು ಆಗದೆ ಉಳಿಯಲು ಆಗದ ಪ್ರೀತಿಯ ಕಳಕಳಿ.....
ಅಷ್ಟರಲ್ಲೇ ಇನ್ನೊಂದು ಜೋಡಿ ತಮಿಳುನಾಡ ಕಡೆಯವರು
ಬಂದು ಮ್ಯಾಚಸ್ ಇದ್ಯಾ ಕೇಳಿದರು. ಆದ್ಯಾಳ ಕೈಲಿದ್ದ ಲೈಟರ್ ಕೊಟ್ಟಳು. ಅಮರ್ ಮತ್ತು ಅರ್ಪಿತಾ ಪಕ್ಕದಲ್ಲಿ ಕುಳಿತರು. ಪರಿಚಯವಾಯಿತು. Both are Committed. ಅವರು ಕೈಲಿದ್ದ ವೀಡನ್ನು ಹಚ್ಚಿ ಕುಳಿತರು. ಆದ್ಯಾಳು ಸೇದಿದಳು.ಆದಿಯೂ ಕೂಡ.
ಎರಡು ಮೂರು ಪಫ್ ಸೇದುವ ಒಳಗಡೆ ಅರ್ಪಿತಾ ಮತ್ತು
ಆದ್ಯಾ ಇಬ್ಬರನ್ನು ನಶೆ ಮಾತಾಡಿಸಲು ಪ್ರಾರಂಭಿಸಿತ್ತು.ಅರ್ಪಿತಾ ಅಲೆಗಳ ಶ್ರುತಿಗೆ ಕುಣಿಯಲು ಶುರು ಮಾಡಿದರೆ, ಆದ್ಯಾ
ಗೆಲಿಲಿಯೋ ಥಿಯರಿಗಳನ್ನು ಮೀರುವಂತೆ ಆಕಾಶವನ್ನು
ಬೀಚ್ನಲ್ಲಿ ಮಲಗಿ ವರ್ಣಿಸಲು ಶುರುಮಾಡಿದ್ದಳು. ನಶೆಯ
ಥಿಯರಿ ಮುಗಿಯುವ ಸೂಚನೆಗಳೆ ಕಾಣಲಿಲ್ಲ. Adya was shivering being High...ಅವಳ ಮೈಯೆಲ್ಲ ಗಡ ಗಡ ನಡುಗಲು ಶುರುವಾಗಿತ್ತು. ಆದಿಗೆ ಮನದ ಮೂಲೆಯಲ್ಲಿ ಭಯವು ಶುರುವಾಗಿತ್ತು.
ಮೂರು ಜನರಿಗೂ ಬಿಡದಂತೆ ಒಬ್ಬಳೇ ಮಾತಾಡುತ್ತಿದ್ದಳು.
ಆದ್ಯಾ ಸಾಕು ಅವರಿಬ್ಬರು ಕಪಲ್ಸ್ ಕಣೆ ಪ್ರೈವೆಸಿ ಕೋಡಣ
ಎಂದು ಹಲವು ಬಾರಿ ಆದಿ ಹೇಳಿದರು ಅವಳು ಕಿವಿಗೆ
ಹಾಕಿಕೊಳ್ಳಲಿಲ್ಲ. ನಶೆಯೆರಿದ್ದ ನಾಲಿಗೆ ಲಂಗು ಲಗಾಮಿಲ್ಲದೆ
ಉಸುಕಿನಲ್ಲಿ ಅಲೆಯುತಿತ್ತು. ಸಾಕಷ್ಟು ಸಮಯದ ನಂತರ ಬೀಚಿನಿಂದ ಮೇಲೆದ್ದು ಹೊರಟರು. ಆದಿ ಆದ್ಯಾಳ ಕೈ ಹಿಡಿದು
ರೂಮಿಗೆ ಕರೆದುಕೊಂಡು ಹೋದ. ರೂಮ್ ಬಳಿ
ಹೋಗುವವರೆಗೂ ಆದ್ಯಾಳಿಗೆ ಅನುಮಾನ. ನಶೆಯಲ್ಲಿ
ನೀನೇಲ್ಲೋ ನನ್ನನ್ನ ಬೇರೆ ಕಡೆಗೆ ಕರ್ಕೊಂಡು ಹೋಗ್ತಾ
ಇದ್ದೀಯ, ನಂಗೇನುಮಾಡ್ಬೇಡ ಪ್ಲೀಸ್ ಎನ್ನುವ ತೊದಲುವ
ದನಿಯಲ್ಲಿ ಭಯವಿತ್ತು. ಫ್ರೆಶ್ ಆಗಿ ರೂಮಿನಲ್ಲಿ ಮಲಗಿದಳು. ಒಂದೇ ಬೆಡ್ ಶೇರ್ ಮಾಡುತ್ತಿದ್ದ ಆದಿ ಇಂದು ನೆಲದ ಮೇಲೆ ಮಲಗಿದ್ದ.
ಆದಿ ರೂಮಿನ ಬಾಗಿಲು ನಾಕ್ ಮಾಡಿದ, ಬಾಗಿಲು
ತೆಗೆದುಕೊಂಡಿತು. ಆದ್ಯಾ ಡ್ರೆಸ್ ಚೇಂಜ್ ಮಾಡುತ್ತಿದ್ದಳ್ಳು. ನಶೆಯಲ್ಲಿ ಆದಿ ಹೋದ ಅರಿವು ಕೂಡ ಅವಳಿಗಿರಲಿಲ್ಲ.
ಬಾರೋ ಪರ್ವಾಗಿಲ್ಲವೆಂದಳು. ಅಲ್ಲೇ ಬಾಗಿಲ ಬಳಿಯಿಂದ ಅವಳ ಮೈಯ ನಿಲುವು, ತೊಟ್ಟ ರಾತ್ರಿಯ ತೆಳುವಾದ ಗೌನ್, ಅವಳ ನಡು, ಉಬ್ಬಿದ ಎದೆ,
ತುರುಬು ಕಟ್ಟಿದ್ದ ಕೂದಲು ನೋಡಿ ಆದಿಗೆ
ಬ್ರಾಂತಿಯಾದಂತಾಯಿತು. ಹೀಗೆ ಹೆಣ್ಣಿನ ಅಂದವನ್ನು ಅಷ್ಟು
ಹತ್ತಿರದಿಂದ ಸವಿದದ್ದು ಮೊದಲಬಾರಿ. ಆದ್ಯಾ ಯಾಕೋ ಆದಿ ಏನಾಯ್ತೋ ಮಾತೇ ಆಡ್ತಿಲ್ಲ ಎಂದಳು. ಆದಿಗೆ ತನ್ನೆದುರಿಗೆ ನಿಂತ ಆದ್ಯಾಳನ್ನು ಮಾತಾಡಿಸದೆ ಅವಳನ್ನು ಬಾಚಿ ಬಿಗಿದಪ್ಪಿಕೊಂಡು ದೇಹದ ಕೋಮಲತೆಯನ್ನುಮನಸಾರೆ ಅನುಭವಿಸಬೇಕು
ಎನಿಸಿತು. ಅವಳ ತೊಳನ್ನು ಬಳಸಿ ತನ್ನ ಎದೆಗೆ ಅವಳ
ಎದೆಯನ್ನು ಬಿಗಿದುಕೊಂಡು ತುಟಿಗಳ ಹಸಿವನ್ನು ಅವಳ ಕೆನ್ನೆ, ತುಟಿಗಳ ಮೇಲೆ ನೀಗಿಸಿಕೊಂಡು ಅವಳ ಮೈಮೇಲೆ ಮೃದುವಾಗಿ ಕೈಯಾಡಿಸಿದ. ಆದ್ಯಾ ನಾಚಿಕೆಯಿಂದ ಆದಿಯನ್ನು ತಳ್ಳಿ ದೂರ ಚಿಮ್ಮಿದಳು.
ಮತ್ತೊಮ್ಮೆ ಹತ್ತಿರ ಹೋಗಲು ಆದಿ ಪ್ರಯತ್ನಿಸಿದ. ಆದಿಗೆ
ಅಷ್ಟರಲ್ಲಿ ಬಾಯರಿಕೆಗೆ ಎಚ್ಚರವಾಯಿತು. ಕಂಡ ಕನಸಿಗೆ
ಅವನಿಗೆ ಅಸೂಯೆಯಾಗಿ ನೀರು ಕುಡಿಯಲು ಮುಂದಾದ.
ಎದ್ದವನ ದೃಷ್ಟಿ ಮಂಚದ ಕಡೆಗೆ ತಿರುಗಿತು.ಆದ್ಯಾ ದಣಿದು ಮಲಗಿದ್ದಳು. ನಿದ್ರಿಸಿದ ನಿಲುವುಗಳು ಸರಿಯಿರಲಿಲ್ಲ. ಮೈಮೇಲೆ ಹೊದ್ದಿದ್ದ ಹೊದಿಕೆ ಕೆಳಬಿದ್ದಿತ್ತು. ಸರಿಯಾಗಿ ಆದ್ಯಾಳಿಗೆ ಹೊದಿಸಿ ನೀರು ಕುಡಿದು ಮಲಗಿದ.
ಮರುದಿನ ಸಂಜೆ ವಾಪಸ್ ಬೆಂಗಳೂರಿಗೆ ಹೊರಡಬೇಕು
ಅಂದುಕೊಂಡು ಮತ್ತೆ ಬೆಳಗ್ಗಿನ ತಿಂಡಿ ಮುಗಿಸಿ ಸಮುದ್ರದ ಕಡೆ ಹೊರೆಟೆರು. ಅಮರ್ ಮತ್ತು ಅರ್ಪಿತಾ
ದಾರಿಯಲ್ಲಿ ಸಿಕ್ಕಿದರು. ರಾತ್ರಿ ನಡೆದ ಆದ್ಯಾಳ ಥಿಯರಿ ನೆನದು ನಕ್ಕು ಸೆಲ್ಫಿ ತೆಗೆದುಕೊಂಡು ಕೆಫೆಯಲ್ಲಿ ಕುಳಿತು
ಮದ್ಯ ಮಿಶ್ರಿತ ಮೋಜಿಟೋ ಅರ್ಡರ್ ಮಾಡಿದರು.
ಮೋಜಿಟೊಗಳ ಮೇಲೆ ಮೋಜಿಟೋ ಅರ್ಡರ್ ಆಗುತ್ತಾ ಹೋದವು, ಪ್ಯಾಕುಗಟ್ಟಲೇ ಸೀಗೆರೆಟ್ ಸುಟ್ಟವು. ನಶೆಯಲ್ಲಿ ಸಿಗೇರಿಟಿನ ತುದಿ ಬುಡ ತಿಳಿಯದ ಪರಿಸ್ಥಿತಿಗೆ ಆದ್ಯಾಮತ್ತು ಅರ್ಪಿತಾ ತಲುಪಿದ್ದರು. ಮದ್ಯಾಹ್ನವಾಗುವ ಹೊತ್ತಿಗೆ ಇಬ್ಬರು ನಶೆಯಲ್ಲಿ ತೇಲಿ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಹೊಗೆ ಉಗುಳಲು ಶುರುವಾಗಿತ್ತು. ಆದ್ಯಾ ಮತ್ತು ಅರ್ಪಿತಾ ಕಿಸ್ಗಳ
ಸರಣಿಯೇ ಹರಿಸಿದ್ದರು. ಹಾಕಿದ ಟಾಪ್ ಎತ್ತಿ ಬೆಲ್ಲಿ ಡ್ಯಾನ್ಸ, ಕೈ ಕೈ ಹಿಡಿದು ವಿವಿಧ ನೃತ್ಯ ಮಜಲುಗಳನ್ನು ನೀಡಿ ನಮ್ಮ ಬಾಲ್ಯದಫೆಂಟಾಸಿಗಳನ್ನು ಕಣ್ಮುಂದೆ ತಂದು ಕೆಫೆಯಲ್ಲಿ ನೆರೆದ ಇತರ
ಜನಗಳಿಗೆ, ಕೆಫೆಯ ಟೆಂಡರ್ಸ್ಗಳಿಗೆ ಬಿಟ್ಟಿ ಮನೋರಂಜನೆಯನ್ನುನೀಡಿದರು. ಆದಿಗೆ ತಲೆಯಲ್ಲಿ ಸಲಿಂಗ ಪ್ರೇಮಿಗಳ ವಿಚಾರಗಳುಬರುತಿದ್ದವು. ಆದಿ ಮತ್ತು ಅಮರ್ ಮೂಖ ಪ್ರೇಕ್ಷಕರು. ಸಿಕ್ಕ ಸಮಯವನ್ನು ಬಳಸಿದ ಅಮರ್ ಆದ್ಯಾಳ ತುಟಿಗಳನ್ನು ಸವಿದ.ಅರ್ಪಿತಾ ಆದಿಯಿಂದ ಕಿಸ್ ಬಯಸಿ ಅವನ ಕಡೆಗೆ ತಿರುಗಿ ಕಣ್ಣಿನಲ್ಲಿ ಸನ್ನೆ ಮಾಡಿದಳು. ಆದಿ ನಿರಾಕರಿಸಿ
ಅರ್ಪಿತಾಳ ಹಣೆಗೆ ಚುಂಬಿಸಿದ.
ಅಮರ್ ಮತ್ತು ಅರ್ಪಿತಾ ಇವರಿಬ್ಬರಿಗೂ ಇನ್ನೊಂದು ದಿನ ಉಳಿದು ಹೊರಡಿ,ಅವರು ನಾಳೆಯೇ ಹೊರಡುತ್ತೇವೆಂದು ಒತ್ತಾಯ ಮಾಡುತಿದ್ದರು. ಆದ್ಯಾಳಿಗೆ ಅಲ್ಲಿರುವ ಬಯಕೆ, ಆದರೆ ಆದಿಯ ಮನಸ್ಸು ಕದಡಿತ್ತು. ಅಲ್ಲಿಂದ ಹೊರಟರೆ ಸಾಕೆನ್ನುವ ಮನಸ್ಥಿತಿಗೆ ತಲುಪಿದ್ದ. ಆದ್ಯಾಳನ್ನು ಒಪ್ಪಿಸಿ ಟೇಬಲ್ನಿಂದ ಮೇಲೆದ್ದ. ಅಮರ್ ಆದ್ಯಾಳ ಕೈ, ಅರ್ಪಿತಾ ಆದಿಯ ಕೈ ಹಿಡಿದು ಕಿನಾರೆಯಲ್ಲಿ ನಡೆಯುತ್ತಿದ್ದರು. ಅಮರ್ ಮತ್ತು ಆದ್ಯಾ ನಡಿಗೆಯನ್ನು Enjoying Fullest. ಅರ್ಪಿತಾ ಆದಿಯ ಬಳಿ ಮುಂದಿನಬಾರಿ ಇನ್ನೊಮ್ಮೆ ಭೇಟಿಯಾಗೋಣ, ಮೆಸೇಜ್ ಮಾಡುತ್ತಿರು,ಇಲ್ಲಿಂದಾ ಹೋದ ಕೂಡಲೇ ನೀನು ನನ್ನನ್ನಾ ಮರೆತೋಗ್ತಿಯಾ ಅಲ್ವಾ, ಹೀಗೆ ಹಲವು ವಿಚಾರಗಳನ್ನು ಹೇಳುತಿದ್ದರೆ, ಆದಿಗೆ ಅವನೊಳಗಿನ ಸಂದಿಗ್ಧತೆ ಅವನನ್ನು ಚುಚ್ಚುತಿತ್ತು. ಒಂದೆಡೆ ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿರುವಾಗ ಇವನಿಲ್ಲಿ ಹೀಗೆ ಸುತ್ತಾಡುತ್ತಿರುವುದು ಸಮಂಜಸವೇ ? ಇನ್ನೊಂದು ಕಡೆ ಪರಿಸ್ಥಿಯ ಅರಿವಿದ್ದರೂ ಮುಂದಿನಾ ಟ್ರಿಪ್ಗೆ ಮಿಸ್ ಮಾಡದೇ ಬರಬೇಕೆಂಬಾ ಪ್ರಾಮಿಸ್ ತೆಗೆದುಕೊಂಡ ಆದ್ಯಾಳ ವರ್ತನೆ ಇವನಿಗೆ ಬೇಸರತರಿಸಿತ್ತು. ಆದ್ಯಾಳಿಗೆ ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಬೇಕಾ ಅಥವಾ ಹೊತ್ತೆತ್ತಾ ತಾಯಿಯ ಕಷ್ಟಗಳಿಗೆ ಹೋಗಿ ಹೆಗಲು ಕೊಡಬೇಕೆಂಬ ಇಕ್ಕಟ್ಟಿನಲ್ಲಿ ಆರ್ಪಿತಾಳಾಡಿದ ಯಾವ ಮಾತನ್ನು ಆದಿ ಕಿವಿಗೆ ಹಾಕಿಕೊಳ್ಳಲಿಲ್ಲ. ಕೆಂಪಾದ ಆಕಾಶದಲ್ಲಿ ಮುಳುಗುತ್ತಿರುವ ಸೂರ್ಯನನ್ನು
ತದೇಕ ಚಿತ್ತದಿಂದ ಆದಿ ನೋಡುತ್ತಿದ್ದ.
No comments:
Post a Comment