ಪಿಸುಮಾತು

ಪಿಸು ಮಾತಿನ ತುಸು ಕರೆಗೆ 
ತಡಮಾಡದೆ ನಾ ಬರಲೇ 
ಹೊಸಮಾತಿನ ಸರಿಗಮಕೆ 
ದ್ವನಿಯಾಗಲೇ ನಾ ನಿನಗೆ 
ನಾ ಮನಸ್ಸಿನ ವ್ಯಾಪಾರಿ ನಿನ್ನ ಕನಸು ಬೇಕಿದೆ 
ಈ ಪ್ರೀತಿಯ ಬೀದಿಯಲಿ ನನ್ನ ಹೃದಯ ಬಿಕರಿಯಾಗಿದೆ 

ಪಿಸು ಮಾತಿನ ನಿನ್ನ ಕರೆಗೆ 
ಸಹಿ ಹಾಕಲೆ ಮನಸ್ಸೊಳಗೆ 

ಬೆಳದಿಂಗಳಂತೆ ಬಾಳಲ್ಲಿ ಬಂದೆ 
ಮಿಂಚಾಗಿ ಬಂದು ಬೆಳಕನ್ನು ತಂದೆ 
ನಿನ್ನ ಮುಂಗುರುಳ ನಗೆಗೆ ಬಲಿಯಾದೆ ನಾನು 
ಈ ಪ್ರೀತಿಯ ಖಾಯಿಲೆಗೆ ಉಪಶಮನ ನೀನು 

ಪಿಸು ಮಾತಿನ ತುಸು ಕರೆಗೆ 
ಕರಗೋದೆ ನಿನ್ನ ಕರದೊಳಗೆ 

ನಸುಕಲಿ ಕಂಡ ಸವಿ ಕನಸಂತೆ 
ಇರಬಹುದೇನೊ ನೀ ನನ್ನ ಜೊತೆಗೆ 
ಮುಂಜಾನೆ ತಂದ ತಂಗಾಳಿಯಂತೆ 
ಮುಗುಳ್ನಗೆಯ ತಂದು ಮನಸಲ್ಲಿ ನಿಂತೆ

No comments:

Post a Comment

ದಾರಿ ತಪ್ಪಿದ ದಾಸಿ

ಸ್ವಭಾವತಃ ಬಲುಪಾಪ. ಹಣೆಯೊಲ್ಲೊಂದು ಬಿಳಿನಾಮ.ಆದ್ರಿಂದ ಅವ್ಳಿಗೆ ದಾಸಿ ಎಂಬಾ ನಾಮಕರಣವಾಯಿತು. ಉಳಿದ ಕಡೆಯಲ್ಲ ಬರೆ ಶ್ಯಾಮಲ. ನೋಡಲೂ ದಷ್ಟಪುಷ್ಟವಾಗಿದ್ದು ಊರಿನಲ್ಲಿ ಯಾ...